ಸಬಳೂರು: ಶ್ರೀ ರಾಮ ಗೆಳೆಯರ ಬಳಗ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ, ದೀಪಾವಳಿ ಕ್ರೀಡೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,.11 ಕಡಬ: ಕಡಬ ತಾಲೂಕು ಕೊೈಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಅ.27 ರಂದು ಸಾಮೂಹಿಕ ಗೋಪೂಜೆ, ದೀಪಾವಳಿ ಕ್ರೀಡೋತ್ಸವ, ಧಾರ್ಮಿಕ ಸಭೆಯು ಸಬಳೂರು ಶ್ರೀ ರಾಮ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ.

ಬೆಳಿಗ್ಗೆ ಸಾಮೂಹಿಕ ಗೋಪೂಜೆ, ಬಳಿಕ ನಡೆಯಲಿರುವ ಕ್ರೀಡೋತ್ಸವಕ್ಕೆ ಪ್ರಗತಿಪರ ಕೃಷಿಕ ಕೊರಗಪ್ಪ ಗೌಡ ಕಡೆಂಬ್ಯಾಲು ಚಾಲನೆ ನೀಡಲಿದ್ದಾರೆ. ಶ್ರೀ ರಾಮ ಭಜನಾ ಮಂಡಳಿಯ ಉಪಾಧ್ಯಕ್ಷ ರಾಮಯ್ಯ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ಗಣೇಶ್ ಗೌಡ ಎರ್ಮಡ್ಕ ಆಗಮಿಸಲಿದ್ದಾರೆ. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ , ಸಾರ್ವಜನಿಕರಿಗೆ ವಿವಿಧ ಸ್ಪರ್ದೆ ನಡೆಯಲಿದೆ. ಸಾಯಂಕಾಲ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಸದಸ್ಯೆ ಜಯಂತಿ ಆರ್ ಗೌಡ ವಹಿಸಲಿದ್ದಾರೆ. ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಿರೀಶ್ ಕುಮಾರ್ ಪ್ರಮುಖ ಬಾಷಣ ಮಾಡಲಿದ್ದಾರೆ. ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ರಾಮಚಂದ್ರ ಏಣಿತ್ತಡ್ಕ ಅತಿಥಿಗಳಾಗಿರುವರು ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ದೋಣಿ ಮುಳುಗಡೆ; 9 ಮೀನುಗಾರರ ರಕ್ಷಣೆ..!

error: Content is protected !!
Scroll to Top