ಅಪಾಯದ ಮಟ್ಟ ಮೀರಿ ಬೆಳೆಯುತ್ತಿರುವ ‘ಪಬ್ಜಿ’ ➤ ಸ್ಮಾರ್ಟ್ ಫೋನ್ ಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವ ಯುವಸಮೂಹ

(ನ್ಯೂಸ್ ಕಡಬ) newskadaba.com ವಿಶೇಷ  ಲೇಖನ: ಒಂದು ಕಾಲವಿತ್ತು ಅಲ್ಲಿ ಸಂಬಂಧಗಳಿಗೆ ಬೆಲೆ ಅನ್ನೋದಕ್ಕೆ ಅರ್ಥವಿತ್ತು, ಮಕ್ಕಳು ಮನೆಯವರ್ರು ಅಂತ ಖುಷಿಯೂ ಇರುತ್ತಿತ್ತು.ಆಟಕ್ಕೆ, ಊಟಕ್ಕೆ  ಎಲ್ಲದಕ್ಕೂ ಸಮಯವಿತ್ತು. ಈ ಹಿಂದೆ ಅಲ್ಲು ವಿಡೀಯೊ ಗೇಮ್ ಗಳಿದ್ದವು ಒಂದಷ್ಟು ಮಕ್ಕಳು ಅದಕ್ಕೂ ಆಡಿಕ್ಟ್ ಆಗುತ್ತಿದ್ದರು, ಆದರೆ ಅದು ಜೀವ ಜೀವನ ಅಂತ್ಯಗೊಳಿಸುವಷ್ಟು ಮಟ್ಟಕ್ಕೆ ಇಳಿಯುತ್ತಿರಲಿಲ್ಲ. ಆದೆರೆ ಈಗಿನ ಬಹುತೇಕ ಮಕ್ಕಳು ಸಮಯ ಸಂದರ್ಭಗಳು ಕಳೆಯುವುದು ಸ್ಮಾರ್ಟ್‍ಫೋನ್ಗಳಲ್ಲಿ ಅನ್ನೊದು ಸಾಬೀತು ಮಾಡುತ್ತಿದ್ದಾರೆ. ಇದಕ್ಕು ಮುಖ್ಯವಾಗಿ ಮಕ್ಕಳೆ ಕಾರಣವಲ್ಲ, ಯಾಕಂದ್ರೆ ದುಡಿಮೆಗಾಗಿ ಪೋಷಕರು ಹಳ್ಳಿ, ಗ್ರಾಮೀಣ ಪ್ರದೇಶಗಳನ್ನು ಬಿಟ್ಟು ನಗರಗಳ ಕಡೆ ಮೂಖ ಮಾಡಿ ಹೊರಡುತ್ತಾರೆ, ಇಲ್ಲಿ ಮಕ್ಕಳಿಗೆ ಮುಖ್ಯವಾಗಿ ಆಟವಾಡಲು ಸ್ಥಳವಕಾಶದ ಕೊರತೆಯಿಂದ ಮಕ್ಕಳು ಕಾಲಕ್ರಮೇಣ  ಸ್ಮಾರ್ಟ್‍ಫೋನ್ಗಳ ಮೋರೆ ಹೋಗುತ್ತಿರುವುದು ಅನಿವಾರ್ಯವಾಗಿ ಬಿಟ್ಟಿದೆ. ಸ್ಮಾರ್ಟ್‍ಫೋನ್ಗಳಲ್ಲಿ ತಮಗೆ ಬೇಕಾದ ಗೇಮ್ ಗಳನ್ನು ಆರಿಸಿಕೊಂಡು ಕಾಲಕಳೆಯುತ್ತಿದ್ದಾರೆ.

ಸ್ಮಾರ್ಟ್‍ಫೋನ್ಗಳು ಅಲ್ಲದೆ, ಅವುಗಳಲ್ಲಿ ಸದ್ದು ಮಾಡುತ್ತಿರುವ ಕಿರಾತಕ ಗೇಮ್ ಗಳು ಅಪಾಯದ ಮಟ್ಟ ಮೀರಿ ಯುವಜನತೆಯ ತಲೆಕೆಡುವಂತೆ ಮಾಡಿದೆ..ಅದೇನು ಗೊತ್ತೇ? ವಿಶ್ವದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟು ಹಾಕಿರುವ ಗೇಮ್ ಅಂದ್ರೆ ಅದು ಪಬ್ ಜಿ. ಯುವ ಜನಾಂಗದ  ನಡವಳಿಕೆ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ನಮಗೆ ಅಂಗೈಯಲ್ಲಿ ಇಡೀ ಜಗತ್ತನ್ನೇ ತೋರಿಸುವ ಸ್ಮಾರ್ಟ್‍ಫೋನ್ಗಳು ಒಂದು ರೀತಿಯಲ್ಲಿ ನಮ್ಮ ಬದುಕಿನ ಭಾಗವು ಆಗಿದೆ. ಆದರೆ  ನಾವು ಯೋಚಿಸಬೇಕಾದ ಅಂಶವೆಂದರೆ ಸ್ಮಾರ್ಟ್‍ಫೋನ್ಗಳ ಅತೀಯಾದ ಬಳಕೆಯಿಂದ ಹಾಗೂ ಅವುಗಳು ಒದಗಿಸುವ ಹೊಸ ಹೊಸ ಸೇವೆಗಳಿಂದ ಇಂದಿನ ಯುವಜನತೆ ಸಂಪೂರ್ಣವಾಗಿ ಅಡಿಕ್ಟ್ ಆಗುವಂತೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇಂದು ಹುಟ್ಟಿದ ಮಕ್ಕಳ ಕೈಯಲ್ಲಿಯೂ ಕಾಣಸಿಗುವುದು ಸ್ಮಾರ್ಟ್‍ಫೋನ್ ಒಂದೇ. ಕಡಿಮೆ ಅಂದ್ರು ಒಂದು ಹತ್ತು ವರುಷಗಳ ಹಿಂದೆ ಒಂದು ಮೊಬೈಲ್ ಇದ್ದರೆ ಸಾಕು ಅವರೇ ಶ್ರೀಮಂತರು ಎಂದು ಕರೆಯುವ ದಿನಗಳಿದ್ದವು. ಆದರೆ ಈಗ ಹುಟ್ಟುತ್ತಾನೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಬಿಡುತ್ತಾರೆ. ಇದು ಒಂಥರಾ ಕ್ರೇಜ್ ಆಗ್ಬಿಟ್ಟಿದೆ.

Also Read  “ಡೆಂಟಲ್ ಟ್ರಾನ್ಸ್ ಪ್ಲಾಂಟೇಷನ್”- ಡಾ. ಚೂಂತಾರು

ಇತ್ತ ದಿನಗಳು ಉರುಳಿದಂತೆ ಸ್ಮಾರ್ಟ್‍ಫೋನ್ಗಳಲ್ಲಿ ಅಪರಿಮಿತ ಸೌಲಭ್ಯಗಳ ಜೊತೆಗೆ ವಿಡಿಯೋ  ಗೇಮಿಂಗ್‍ಗಳಂತಹ ಆ್ಯಪ್‍ಗಳು ಆನೇಕರ ಜೀವಕ್ಕೆ ಕುತ್ತು ತಂದಿದೆ. ಪುಟ್ಟ ಮಕ್ಕಳಿಂದ ಹಿಡಿದು ಯುವಕರವರೆಗೂ ಸ್ಮಾರ್ಟ್‍ಫೋನ್ಗಳಲ್ಲಿ ಸಿಗುವ ಕಿಲ್ಲರ್ ಗೇಮ್ ಗಳಿಗೆ ಅಂಟು ಬಿದ್ದು ಬಲಿಯಾಗುತ್ತಿದ್ದಾರೆ. ಹೆತ್ತವರ ಮಾತು ಕೇಳದೆ ಅದೆಷ್ಟೋ ಹುಡುಗರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನಗಳು ತಾ ಮುಂದು,ನಾ ಮುಂದು ಎಂದು ಅಭಿವೃದ್ದಿಯತ್ತ ಸಾಗುತಿದೆ. ಇದರಿಂದ್ದಾಗಿ ಮಕ್ಕಳ ಕೈಗೆ ಚಾಕಲೇಟ್ ನಂತೆ ಸ್ಮಾರ್ಟ್‍ಫೋನ್ಗಳಲಿ ಸಿಗುವ ಅಪಾಯಕಾರಿ ಗೇಮ್ ಗಳು. ಇಂದು ಪಬ್ ಜಿ ಯಂತಹ ಅಪಾಯಕಾರಿ ಗೇಮ್ ಗಳು ಯುವಜನತೆಯನ್ನ ಆಕರ್ಷಿಸುವಂತೆ ಮಾಡಿದೆ. ಸಕಾರತ್ಮಕವಾಗಿ ಬಳಕೆಯಾಗಬೇಕಿದ್ದ ಸ್ಮಾರ್ಟ್‍ಫೋನ್ಗಳು ಈಗ ಅಪಾಯಕಾರಿ ಆಗಿ ಬಳಕೆಯಾಗುತ್ತಿರುವುದು ದೊಡ್ಡ ದುರಂತವೆಂದರೆ ತಪ್ಪಾಗದು.  ಕೀ.ಕೀ, ಮೊಮೊ, ಬ್ಲೂವೇಲ್  ಗಳಂತಹ ಅಪಾಯಕಾರಿ  ಗೇಮ್ ಗಳಿಗೆ ಅದೆಷ್ಟೊ ಯುವಜನತೆ ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ ಅನ್ನೋದು ತಿಳಿದಿರುವ ವಿಚಾರ.

ಹೀಗಿದ್ದರು ಒಂದೊಂದು ಕಿರಾತಕ ಗೇಮ್ ಗಳಿಗೆ ಗೇಟ್ ಪಾಸ್ ಕೊಡ್ತಾ ಹೊದಂತೆ, ರಕ್ತ ಬೀಜಾಸುರರಂತೆ ಹೊಸ ಹೊಸ ಅಪಾಯಕಾರಿ ಗೇಮ್ ಗಳು ಹುಟ್ಟಿಕೊಳ್ತನೆ ಬರುತ್ತಿದೆ. ಇತ್ತ ಅತೀ ಹೆಚ್ಚು ದುರಂತವನ್ನು ತಂದೊಡ್ಡಿದ ಗೇಮ್ ಎಂದರೆ ಅದು ಪಬ್ ಜಿ. ಮೊಬೈಲ್ ಕೊಡ್ಸಿಲ್ಲ ಅಂತ ಅಪ್ಪ ಅಮ್ಮನನ್ನೆ ಕೊಂದ ಮಕ್ಕಳು ಅದೆಷ್ಟೋ..!!  ಪಬ್ ಜಿ. ಗೇಮ್ ಆಸೆಗೆ ಬಿದ್ದು ಸ್ನೇಹಿತರನ್ನೆ ಕೊಲೆ ಮಾಡಿದ ಕ್ರೂರಿಗಳು ಅದೆಷ್ಟೋ..!!,ಸ್ಕೂಲ್ ಕಾಲೇಜು ಬಿಟ್ಟು ಪಬ್ ಜಿ. ಆಡ್ತಾ ಕುಂತವರು ಅದೆಷ್ಟೋ. ಯುವಜನತೆ..!! ಪಬ್ ಜಿ.ಗೀಳಿಗೆ ಬಿದ್ದು ಹೊಂಡ,ಗುಂಡಿ ಕೊಚ್ಚೆಯಲ್ಲಿ ಬಿದ್ದು ಹೊರಳಾಡಿದ್ದೂ ಉಂಟು. ಹೆತ್ತವರ ಮಾತು ಹೇಗಿದೆ ಎಂದರೆ, ನಾವೂ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್‍ನ್ನ ನೇಮಿಸುವ ಅಗತ್ಯವಿಲ್ಲ, ರಾತ್ರಿಯಿಡಿ ಮಗ ಒಬ್ಬೊಬ್ಬನೇ ಮಾತಾಡ್ತ ಮೊಬೈಲ್ ಜೊತೆ ಕುಳಿತಿರುತ್ತಾನೆ, ಎಂದು. ಮದುವೆ ಮನೆಯಲ್ಲಿ ಮದುಮಗನಿಂದ ಹಿಡಿದು, ಪಬ್ ಜಿ ಗೆ ವ್ಯಸನಿಗಳಾಗುತ್ತಿದ್ದಾರೆ.  ಇದರಿಂದಾಗಿ ಮಕ್ಕಳು ಕ್ರಮೇಣ ಮಾನಸಿಕ ಖಿನ್ನತೆ ಗೆ ಒಳಗಾಗುತ್ತಿದ್ದಾರೆ. ಪೋಷಕರು ಬುದ್ದಿ ಹೇಳಲು ಹಿಂದೆ ಮುಂದೆ ಹೆದರುತ್ತಾರೆ, ಯಾಕೆಂದರೇ ಮಕ್ಕಳು ಹಿಂಸಾತ್ಮಕ ದಾರಿಗಳನ್ನ ಹಿಡಿಯುತ್ತಾರೆ, ಜೊತೆಗೆ ಅದೆಷ್ಟೊ ಪೋಷಕರು ಮಕ್ಕಳ ಕೋಪಕ್ಕೆ ಬಲಿಯಾಗಿದ್ದಾರೆ. ಇನ್ನು ಸಿಟಿಗಳಲ್ಲಿ ಹೆಚ್ಚಾಗಿ ಮಕ್ಕಳಿಗೆ ಆಟವಾಡಲು ಸರಿಯಾದ ಮೈದಾನಗಳಿಲ್ಲದೆ, ಮಕ್ಕಳು ಮನೆಯಲ್ಲಿಯೇ ಕುಳಿತು ಸ್ಮಾರ್ಟ್‍ಫೋನ್ಗಳ ಮೊರೆ ಹೋಗುತ್ತಿರುವುದು ಕಾಣಬಹುದು. ತಮಗೆ ಬೇಕಾದ ಆಟಗಳನ್ನ ಆನ್ ಲೈನ್ ಮೂಲಕ ಸಂಪಾದಿಸಲು ಮುಂದಾಗುತ್ತಾರೆ. ಕ್ರಮೇಣ  ಸ್ಮಾರ್ಟ್‍ಫೋನ್ಗಳ ಹೊತ್ತು ಗೊತ್ತು ಇಲ್ಲದೆ, ಸಮಯ ಸಂದರ್ಭವೆನ್ನದೆ ಬಳಕೆಯಿಂದ  ಹಿಂಸಾತ್ಮಕ ದಾರಿ ತುಳಿಯುತ್ತಾರೆ. ಇದರಿಂದಾಗಿ ನಿದ್ರಾಹೀನಾತೆ, ಶಾಲೆಗೆ ಚಕ್ಕರ್ ಹೊಡೆಯುವುದು,ಕ್ರಮಬದ್ದವಾದ ಆಹಾರ ಸೇವನೆ ಇಲ್ಲದೆ ಇರುವುದು, ತಾನಾಗೀಯೆ ತನ್ನ ಆರೋಗ್ಯ ಕೆಡಿಸಿಕೊಳ್ಳುದು, ಮಾನಸಿಕ ಖಿನ್ನತೆಗೆ ಜಾರುವುದು ಇಂತಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

Also Read  ಪ್ರೀತಿಯಲ್ಲಿ ಮುನಿಸೇ? ಈ ತಂತ್ರದಿಂದ ಒಂದು ಮಾಡೋಣ

ಮುಖ್ಯವಾಗಿ ಆನ್ ಲೈನ್ ನ ಅಪಾಯಕಾರಿ ಗೇಮ್ ಗಳನ್ನು ತಡೆಯಲು ಒಂದಿಷ್ಟು ಕಾನೂನುಗಳನ್ನು ಜಾರಿಗೆ ತಂದರೆ ಕೆಲವೂ ಅನಾಹುತಗಳನ್ನದಾರು ತಡೆಯಬಹುದು. ಯಾಕೆಂದ್ದರೆ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ಸ್ಮಾರ್ಟ್‍ಫೋನ್ಗಳ ಬಳಕೆಯಲ್ಲಿ ಯುವಜನತೆ ಭಾಗಿಯಾಗುತ್ತಿರುವುದು ಹೆಚ್ಚುತ್ತಲೆ ಇದೆ. ಉತ್ತಮ ಕಾನೂನು ಜಾರಿಗೊಳಿಸುವುದರಿಂದ  ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಭಾರತದಲ್ಲಿ ಸುಮಾರು 46 ಕೋಟಿ ಗಿಂತಲೂ ಅಧೀಕ ಮಂದಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರಿದ್ದಾರೆ. 28 ಕೋಟಿ ಗೂ ಅಧಿಕ ಮಂದಿ ನಗರ ಪ್ರದೇಶದಲ್ಲಿ ಬಳಕೆದಾರರು ಇದ್ದಾರೆ, ಭಾರತದಲ್ಲಿ ಸುಮಾರು 40 ಕೋಟಿ ಸ್ಮಾರ್ಟ್‍ಫೋನ್ ಬಳಕೆದಾರರಿದ್ದಾರೆ.

ಇನ್ನು ಈ ಭಯಾನಕ ಗೇಮ್ ನ ಹಿನ್ನಲೆ ನೋಡುವುದಾದರೆ, ಕೊರಿಯಾದ ಬ್ರೆಂಡನ್ ಗ್ರೀನಿ ಎಂಬಾತ ಈ ಪಬ್ ಜಿ ಗೇಮ್ ನ್ನು 2017 ರ ಮಾರ್ಚ್ ತಿಂಗಳಲ್ಲಿ ಕಂಪ್ಯೂಟರಲ್ಲಿ ಆಡಲೆಂದು ಸೃóಷ್ಟಿಸಿದ್ದ. ನಂತರ 2018 ರ ವೇಳೆಗೆ ಮೊಬೈಲ್‍ನಲ್ಲಿಯೂ, ಪಬ್ ಜಿ ಗೇಮ್ ಆರಂಭವಾಯಿತ್ತು. ಅದರ ವ್ಯಸನಶೀಲತೆಯಿಂದಾಗಿ ಇಂದು ಖಾಯಿಲೆಯಂತೆ ಈ ಗೇಮ್ ಹರಡುತ್ತಿದೆ. ಹೀಗೆ ಮಕ್ಕಳು  ಈ ಪರಿಯಾಗಿ ಇಂತಹ ಕಿರಾತಕ ಗೇಮ್‍ಗೆ  ಅಂಟಿಕೊಂಡಿದ್ದಾರೆ. ಇದಕ್ಕೆ  ನೇರವಾದ ಕಾರಣವೆಂದರೆ ವಯಸ್ಕರೂ ಇದರತ್ತ ಆಕರ್ಷಿತರಾಗಿರುವುದು. ವಯಸ್ಕರಲ್ಲೂ ಹಲವರು ದಿನ-ರಾತ್ರಿಯ ಪರಿವೆಯಿಲ್ಲದೆ ಈ ಇಂಟರ್ನೆಟ್ ಗೇಮ್  ಆಡುತ್ತಿದ್ದಾರೆ. ಈ ವ್ಯಸನವು ಮಕ್ಕಳಿಗೆ ನೇರವಾಗಿ ವರ್ಗಾವಣೆಯಾಗುತ್ತದೆ. ಹೀಗಿರುವಾಗ ಮಕ್ಕಳ ಪಾಲನೆ ಪೋಷಣೆಯಲ್ಲಿ ಪೋಷಕರಿಗೆ ಹೊಸದೊಂದು ಜವಾಬ್ದಾರಿಯೆಂದರೆ ಈ ಮೊಬೈಲ್ ವೆಂಬ ವ್ಯಸನದಿಂದ ಮಕ್ಕಳನ್ನು ರಕ್ಷಿಸುವುದು.. ಇನ್ನಾದರೂ  ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು, ಎಚ್ಚರವಹಿಸುವುದು ಅಗತ್ಯವಾಗಿದೆ.

Also Read  ಈ ರೀತಿ ವ್ಯವಹಾರದಲ್ಲಿ ಗೆಲುವು ಪಡೆಯಿರಿ ಮತ್ತು ದಿನ ಭವಿಷ್ಯ

ಆಶಿತಾ ಎಸ್. ಗೌಡ ಬಿಳಿನೆಲೆ

error: Content is protected !!
Scroll to Top