ವೃದ್ಧ ಮಹಿಳೆಯ ಮೇಲೆ ಹಂದಿಗಳ ದಾಳಿ

(ನ್ಯೂಸ್ ಕಡಬ) newskadaba.com ಆಂಧ್ರ ಪ್ರದೇಶ, ಆ .19, ನೆಲ್ಲೂರು ಜಿಲ್ಲೆಯ ಕಾವಲಿಯಲ್ಲಿ ವೃದ್ಧ ಮಹಿಳೆ ಮೇಲೆ ಹಂದಿಗಳು ದಾಳಿ ಮಾಡಿದ ದಾರುಣ ಘಟನೆ ನಡೆದಿದೆ.

ರಸ್ತೆಯಲ್ಲಿ ವೃದ್ಧ ಮಹಿಳೆ ನಡೆದುಕೊಂಡು ಹೋಗುವಾಗ ಹಂದಿಗಳು ಆಕೆಯ ಮೇಲೆ ಏಕಾಏಕಿ ಎರಗಿವೆ. ಹಂದಿಗಳು ಆಕೆಯನ್ನು ರಸ್ತೆ ಮೇಲೆ ಕೆಡವಿ ಭಯಂಕರವಾಗಿ ದಾಳಿ ಮಾಡಿವೆ. ಇನ್ನು ವೃದ್ಧೆ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದ್ದಾರೆ. ಸ್ಥಳೀಯರು ಬರುವಷ್ಟರಲ್ಲೇ ಹಂದಿಗಳ ದಾಳಿಯಲ್ಲಿ ಆಕೆ ಸಾಕಷ್ಟು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

error: Content is protected !!
Scroll to Top