‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ಖ್ಯಾತಿಯ ನಟ ಗುರುಮೂರ್ತಿ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ . 19,: ತೀವ್ರ ಹೃದಯಾಘಾತದಿಂದ ಹಿರಿಯ ನಟ ಗುರುಮೂರ್ತಿ(70) ಕಳೆದ ರಾತ್ರಿ ನಗರದ ಕನಕಪುರ ರಸ್ತೆ ಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಶುಕ್ರವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ತೀವ್ರ ಹೃದಯಾಘಾತವಾಗಿದೆ. ಕೊಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುರುಮೂರ್ತಿಯವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಿರಿಯ ಪುತ್ರ ಯೂರೋಪ್ ಪ್ರವಾಸದಲ್ಲಿರುವುದರಿಂದ ವಾಪಸ್ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಗುರುಮೂರ್ತಿ ಭಾಜನರಾಗಿದ್ದರು.

Also Read  ವಿಹಿಂಪ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ದ ಸುಳ್ಳಾರೋಪ ➤ ಕಿಡಿಗೇಡಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ

ಮೂಲತಃ ತುಮಕೂರಿನ ತಿಪಟೂರಿನವರಾದ ಗುರುಮೂರ್ತಿ, ಗುರುಮಾಮ ಎಂದೇ ಸಿನಿಮಾ, ಚಿತ್ರರಂಗ ಹಾಗೂ ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದರು. ದೂರದರ್ಶನದಲ್ಲಿ ಬರುತ್ತಿದ್ದ ‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ನಿಂದ ಸಾಕಷ್ಟು ಖ್ಯಾತಿಗಳಿಸಿದ್ರು.

ದಿವಂಗತ ಗುರುಮೂರ್ತಿ ಹೆಚ್ಚಿನದಾಗಿ ಪೋಷಕ ಪಾತ್ರ ಹಾಗೂ ಕಾಮಿಡಿ ಪತ್ರಗಳಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗಳಿಸಿದ್ರು. ‘ಮುಕ್ತ ಮುಕ್ತ’ ಧಾರಾವಾಹಿ, ಕನ್ನಡದ ‘ಕಂಟಿ’ ಸೇರಿದಂತೆ ಹಲವು ಸಿರಿಯಲ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

 

error: Content is protected !!
Scroll to Top