(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.11.ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ವತಿಯಿಂದ ಕೌಶಲ್ಯ ಕರ್ನಾಟಕ 3 ತಿಂಗಳ ಉಚಿತ ಟ್ಯಾಲಿ ಮತ್ತು ಜಿಎಸ್ಟಿ ತರಬೇತಿ ನಡೆಯಲಿದೆ.
ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೋಸ್ಕರ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಮುಖ್ಯ ಮಂತ್ರಿಗಳ ಕೌಶಲ್ಯ ಯೋಜನೆ ಅಡಿಯಲ್ಲಿ ಸಂಪೂರ್ಣ ಉಚಿತ ತರಬೇತಿ ನೀಡಿ, ಉದ್ಯೋಗ ನೀಡಲಾಗುವುದು. ತರಬೇತಿ ಪ್ರವೇಶಕ್ಕೆ ಬೇಕಾಗುವ ದಾಖಲಾತಿಗಳು : ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ಡಿಗ್ರಿ ಮಾಕ್ರ್ಸ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರದ ಕಾರ್ಡ್, ಬ್ಯಾಂಕ್ ಪಾಸ್ ಬುಕ್, 2 ಪಾಸ್ ಪೋರ್ಟ್ ಸೈಜ್ ಭಾವಚಿತ್ರ ಆಸಕ್ತರು ತರಬೇತಿಯ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೆರಿಟ್ಯೂಡ್ ಸ್ಕಿಲ್ ಡೆವಲಪ್‍ಮೆಂಟ್ ಲಿಮಿಟೆಡ್(ಐ.ಸಿ.ಎ.ಆಫ್), ಜಿಎಚ್‍ಎಸ್ ಸೆಂಟೆನರಿ ಬಿಲ್ಡಿಂಗ್, 4ನೇ ಮಹಡಿ, ಜಿಎಚ್‍ಎಸ್ ರೋಡ್, ಹಂಪನಕಟ್ಟ ಮಂಗಳೂರು, ದೂರವಾಣಿ ಸಂಖ್ಯೆ 8867223296, 7204051677 ಸಂಪರ್ಕಿಸಬಹುದೆಂದು ಕೌಶಲ್ಯ ಕರ್ನಾಟಕ ಯೋಜನೆ, ದಕ್ಷಿಣ ಕನ್ನಡ ಸಂಯೋಜಕರ ಪ್ರಕಟಣೆ ತಿಳಿಸಿದೆ.