ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ಸ್ವಚ್ಛ ಭಾರತ್ ಮಿಷನ್(ಗ್ರಾ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಸಮಾಲೋಚಕರ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಖಾಲಿ ಇರುವ ಹುದ್ದೆ: ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ(SLWM) ಜಿಲ್ಲಾ ಸಮಾಲೋಚಕರು, ವಿದ್ಯಾರ್ಹತೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ-ಎನ್ವಿರಾನ್‍ಮೆಂಟಲ್ ಇಂಜಿನಿಯರಿಂಗ್ ವಿಥ್ ಸ್ಪೆಷಲೈಸೇಷನ್ ಇನ್ ಎನ್ವಿರಾನ್‍ಮೆಂಟಲ್ ಸೈನ್ಸ್, ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ನೀರು ಮತ್ತು ನೈರ್ಮಲ್ಯ/ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಿಗೆ ಮೊದಲ ಆದ್ಯತೆ (ವಯೋಮಿತಿ ಗರಿಷ್ಠ 38 ವರ್ಷ) ನೀಡಲಾಗುತ್ತದೆ. ಮಾಸಿಕ ಸಮಾಲೋಚನಾ ಶುಲ್ಕ 22,000/-.

Also Read  ಎಸ್.ಎಸ್.ಎಲ್.ಸಿ. ಪರೀಕ್ಷೆ ಇಬ್ಬರು ಎಂಡೋ ಪೀಡಿತ ವಿದ್ಯಾರ್ಥಿಗಳು ತೇರ್ಗಡೆ


ಈ ನೇಮಕಾತಿಯನ್ನು ರದ್ದುಗೊಳಿಸುವ/ತಡೆಹಿಡಿಯುವ/ಸೀಮಿತ ನೇಮಕಾತಿಯನ್ನು ಮಾಡಿಕೊಳ್ಳುವ ಅಧಿಕಾರವನ್ನು ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರು ಹೊಂದಿರುತ್ತಾರೆ. ಸದರಿ ಹುದ್ದೆಯ ಅರ್ಜಿಯು ಜಿಲ್ಲಾ ಪಂಚಾಯತ್‍ನ ವೆಬ್ ಸೈಟ್ ( http://zpdk.kar.nic.in ) ನಲ್ಲಿ ಅಪ್‍ಲೋಡ್ ಮಾಡಿಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2451222 ಸಂಪರ್ಕಿಸಬಹುದು. ಅರ್ಜಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ನೆರವು ಘಟಕ ಇಲ್ಲಿಗೆ ಅಕ್ಟೋಬರ್ 30 ರೊಳಗೆ ಸಲ್ಲಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಪ್ರಕಟಣೆ ತಿಳಿಸಿದೆ.

Also Read  ಕನ್ನಡ ಓದು ಬರಹ ಬಲ್ಲಂತಹ ಹಾಗೂ ಸ್ವ ಉದ್ಯೋಗ ಕೈಗೊಳ್ಳಲು ಆಸಕ್ತಿಯುಳ್ಳ ಯುವಕರಿಗೊಂದು ಇಲ್ಲಿದೆ ಒಂದು ಸುವರ್ಣ ಅವಕಾಶ

error: Content is protected !!
Scroll to Top