ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ನೇಮಕಾತಿ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂಸ್ವಾಧೀನ ಹಾಗೂ ಇತರೆ ಕಾನೂನು ಸಂಬಂಧಿತ ಪ್ರಕರಣಗಳಲ್ಲಿ ಕಾನೂನು ಸಲಹೆ ನೀಡಲು ಕಾನೂನು ಕೋಶ ನಿರ್ಮಿಸಲಾಗಿದೆ.

ಈ ಕಾನೂನು ಕೋಶದಲ್ಲಿ ಒಬ್ಬ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರು ಅಥವಾ ಕಾನೂನು ಪದವೀಧರರಾಗಿರುವ (ಎಲ್ ಎಲ್ ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ/ ನಿವೃತ್ತ ಉಪತಹಶೀಲ್ದಾರ್/ ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958 ರ ನಿಯಮ 313(ಬಿ) ಪ್ರಕಾರ ಮಾಸಿಕ ಸಂಚಿತ ವೇತನ ನಿಗಧಿಗೊಳಿಸಿ ನೇಮಕಾತಿಗೊಳಿಸಲು ಆದೇಶಿಸಲಾಗಿದೆ.ಹುದ್ದೆಗೆ ಅರ್ಹರಾದ ಹಾಗೂ ಜಿಲ್ಲಾಧಿಕಾರಿಯವರ ಕಾನೂನು ಸಲಹೆಗಾರರಾಗಿ ನೇಮಕಾತಿ ಹೊಂದಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಬಯೋಡಾಟಾ ಮತ್ತು ನಿವೃತ್ತಿ ಪೂರ್ವ ಪಡೆಯುತ್ತಿರುವ ವೇತನ ಪ್ರಮಾಣ ಪತ್ರಗಳೊಂದಿಗೆ ಅಕ್ಟೋಬರ್ 26 ರೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಸುಬ್ರಹ್ಮಣ್ಯ: ಮಗುವನ್ನು ಹಾವಿನಿಂದ ರಕ್ಷಿಸಿದ ಬೀದಿ ನಾಯಿ..!

error: Content is protected !!
Scroll to Top