ದಿಲೀಪ್ ವೇದಿಕ್ ಗೆ ಕಾವ್ಯಶ್ರೀ ಪ್ರಶಸ್ತಿ ಪ್ರಧಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,,ಅಕ್ಟೋಬರ್.7.ಸುಳ್ಯ ಚಂದನ ಸಾಹಿತ್ಯ ವೇದಿಕೆ, ದ.ಕ. ಮಾನವರು ಸಹೋದರರು ಸೌಹಾರ್ದ ವೇದಿಕೆ, ಲಾಲ್ ಬಹುದ್ದೂರ್ ಶಾಸ್ತ್ರೀ ಸಾಂಸ್ಕೃತಿಕ ಮತ್ತು ಕಲಾ ಸಂಘ ಹಾಗೂ ಪುತ್ತೂರು ಸಾಹಿತ್ಯ ಇದರ ಆಶ್ರಯದಲ್ಲಿ ಶನಿವಾರ ಕುಂಬ್ರದಲ್ಲಿ ನಡೆದ ಸ್ನೇಹ ಸಮ್ಮಿಲನ 2019 ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ದಿಲೀಪ್ ವೇದಿಕ್ ಅವರಿಗೆ ಅಕ್ಟೋಬರ್ 6 ರಂದು ಕಾವ್ಯ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ನೂಜಿಬಾಳ್ತಿಲದ ಯುವ ಸಾಹಿತಿ, ರಾಜ್ಯ ಕವಿವೃಕ್ಷ ಬಳಗದ ದ.ಕ. ಜಿಲ್ಲಾಧ್ಯಕ್ಷ ದಿಲೀಪ್ ಇವರಿಗೆ ಸುಳ್ಯ ಸಮಾಜ ಚಿಂತಕ ಜಗದೀಶ್ ಪಡ್ಪು ಕಾವ್ಯ ಶ್ರೀ ಪ್ರಶಸ್ತಿ ಪ್ರಧಾನ ಮಾಡಿದರು. ಭ್ರಷ್ಟಚಾರ ನಿಗ್ರಹದಳ ಹಾಗೂ ಅಪರಾಧ ಪತ್ತೆದಳ ಮಂಗಳೂರಿನ ಪ್ರಶಾಂತ್ ರೈ ಮರವಂಜ ಅಧ್ಯಕ್ಷತೆ ವಹಿಸಿದ್ದರು. ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎ. ಅಬ್ದುಲ್ ಅಝೀಝ್ ಪುಣಚ, ಕುಂಬ್ರ ಶಾರದಾ ವಿದ್ಯಾಲಯದ ಸಂಚಾಲಕಿ ಶಾರದಾ, ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷರಾದ ಶಾಂತಾ ಕುಂಟಿಣಿ, ಯುವ ಲೇಖಕ ಮುಹಮ್ಮದ್ ಹಾರಿಸ್, ಜನನಿ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ವಿಜಯ್‍ದಾಸ್ ನವಲಿ, ಯುವಕವಿ ಅನ್ಸಾರ್ ಕಾಟಿಪಳ್ಳ, ಯುವ ಉದ್ಯಮಿ ಸಂಶುದ್ಧೀನ್ ಎ.ಆರ್., ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಚ್.ಭೀಮರಾವ್ ವಾಷ್ಠರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಮಂಗಳೂರು: ಹೊಸ ವರ್ಷಾಚರಣೆಯ ಪಾರ್ಟಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ➤ ಕಮಿಷನರ್ ಶಶಿಕುಮಾರ್

error: Content is protected !!
Scroll to Top