ತುಳು ನಾಡಿನ ಹಳ್ಳಿ ಪ್ರತಿಭೆ- ಯಕ್ಷ ಮಾಣಿಕ್ಯ- ಯಕ್ಷ ಹಾಸ್ಯ ರಸಿಕ ಕಡಬ ದಿನೇಶ್ರೈ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.7.ಕರಾವಳಿ ಪ್ರದೇಶದಲ್ಲಿ ಜನ ಮೆಚ್ಚುಗೆಯನ್ನ ಗಳಿಸಿರುವಂತಹ ವಿಶಿಷ್ಟವಾದ ಕಲೆ ಈ ಯಕ್ಷಗಾನ.

ಈ ಕಲೆಯ ಮೂಲಕ ಧಾರ್ಮಿಕ ಚಿಂತನೆ, ಸಂಸ್ಕೃತಿಕ ಪರಿಚಯ ಸಮಾಜಕ್ಕೆ ನೀಡುವ ವಂತಹ ಕೆಲಸವನ್ನು ಮಾಡುತ್ತಿದ್ದರೆ, ಈ ಕಲಾವಿದರು. ದೂರರ್ದಶನ ಅಂದರೆ(ಟಿವಿ) ಈ ಮಾಧ್ಯಮಗಳ ಸಹವಾಸದಿಂದ ಇಂದಿನ ಯುವಪೀಳಿಗೆಗೆ ಇದರ ಅರಿವೆ ಇಲ್ಲದಂತಾಗಿದೆ. ಈ ಕಲೆಯಲ್ಲಿ ವಿವಿಧ ಪಾತ್ರಗಳನ್ನು ನೋಡಬಹುದು.ಅದರಲ್ಲೂ ಜನರನ್ನು ಹೆಚ್ಚು ಆಕರ್ಷಿಸುವಂತೆ ಮಾಡುವುದು ಹಾಸ್ಯ. ಯಕ್ಷರಂಗದಲ್ಲಿ ಹಾಸ್ಯದ ಮೂಲಕ ದೇಶ ವಿದೇಶಗಳಲ್ಲಿ ತನ್ನದೆಛಾಪನ್ನು ಮೂಡಿಸಿರುವ ಉದಯೋನ್ಮುಖ ಪ್ರತಿಭೆ ಕಡಬ ದಿನೇಶ್‍ ರೈ. ತೆಂಕು-ಬಡಗಿನಲ್ಲಿ ಪೌರಣಿಕ, ಸಾಮಾಜಿಕ, ಐತಿಹಾಸಿಕ, ಯಾವುದೇ ಪ್ರಸಂಗವಾದರೂ ತನಗೆ ಸಿಕ್ಕ ಪಾತ್ರಗಳ ಅಧ್ಯಯನ ಮಾಡಿ ಹಿರಿಯ ಕಲಾವಿದರಿಂದ ಕೇಳಿ ಕಥೆಗೆ ಲೋಪವಾಗದಂತೆ ಸ್ವಂತಿಕೆಯನ್ನು ಸೇರಿಸಿ ಜನರನ್ನು ಹಾಸ್ಯದ ಮೂಲಕ ರಂಜಿಸುತ್ತಿದ್ದಾರೆ.

ಪುತ್ತೂರು ತಾಲೂಕಿನ, ಐತ್ತೂರು ಗ್ರಾಮದ ಬೆತ್ತೋಡಿ ಮಾಳ ಶ್ರೀ ವರದರೈ ಮತ್ತು ವಾರಿಜರೈ ದಂಪತಿಗಳ ಪುತ್ರರಾಗಿರುವ ಇವರು ಪ್ರೌಢಶಾಲೆಯಲ್ಲಿ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸಿ ಮುಂದೆ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರವನ್ನು ಸೇರಿ ಗುರು ಶ್ರೀ ತಾರನಾಥ ಬಲ್ಯಾಯ ವರ್ಕಾಡಿ ಅವರಿಂದ ನಾಟ್ಯಭ್ಯಾಸ ಮಾಡಿ ಯಕ್ಷಗಾನಕ್ಕೆ ಪಾದರ್ಪಣೆ ಮಾಡಿದರು. ಶ್ರೀ ಧರ್ಮಸ್ಥಳ ಮೇಳ ಮತ್ತು ಶ್ರೀ ಪುತ್ತೂರು ಮೇಳದಲ್ಲಿ, ಒಂದು ವರ್ಷ ಶ್ರೀ ಕಟೀಲು ಮೇಳದಲ್ಲಿ ,ಮೂರು ವರ್ಷ ಶ್ರೀ ಕುಂಟಾರು ಮೇಳ ಮತ್ತು ತಳಕಲ ಮೇಳಗಳಲ್ಲಿ ,ಎರಡು ವರ್ಷ ಶ್ರೀ ಮಂಗಳಾದೇವಿ ನಾಲ್ಕು ವರ್ಷ ಮತ್ತು ಯಕ್ಷರಂಗದಲ್ಲಿ ಹೊಸದಂದು ಕ್ರಾಂತಿಯೆಬ್ಬಿಸಿದ ತೆಂಕು-ಬಡಗು ಸಮ್ಮಿಶ್ರಗೊಂಡ ಶ್ರೀ ಹಿರಿಯಡ್ಕ ಮೇಳದಲ್ಲಿ ಮೂರು ವರ್ಷ ಪ್ರಧಾನ ಹಾಸ್ಯ ಕಲಾವಿದರಾಗಿ ಕಲಾ ಸೇವೆಯನ್ನು ಮಾಡಿದ್ದಾರೆ. ಮಳೆಗಾಲದ ತಿರುಗಾಟದಲ್ಲಿ ಅತಿಥಿಯಾಗಿ ಶ್ರೀ ಸಾಲಿಗ್ರಾಮ ಮೇಳದಲ್ಲೂ ತನ್ನ ಕಲಾ ಪ್ರತಿಭೆಯನ್ನು ತೋರಿದ್ದಾರೆ. ಪ್ರಸ್ತುತ ಒಂದು ವರ್ಷದಿಂದ ಸಂಕದಕಟ್ಟೆ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದು, ತುಳು ಕನ್ನಡ ತೆಂಕು-ಬಡಗಿನಲ್ಲಿಯಾವ ಪ್ರಸಂಗವಾದರು ತಮಗೆ ಸಿಕ್ಕಿದ ಪಾತ್ರವನ್ನು ತಮ್ಮದೇ ಶೈಲಿಯಲ್ಲಿ ನಿರ್ವಹಿಸುವುದು. ಇವರ ವೈಶಿಷ್ಟ್ಯ.

 

ಈಗಾಗಲೇ ಹೈದರಾಬಾದ್, ಮುಂಬೈ, ದೆಹಲಿ, ಕೇರಳ, ತೆಲಂಗಾಣ ಹಾಗೂ ಮಸ್ಕತ್, ದುಬೈನಲ್ಲೂ ತಮ್ಮ ಹಾಸ್ಯದ ಹೊನಲನ್ನು ಬಿತ್ತರಿಸಿದ್ದಾರೆ. ಕಳೆದ ಹದಿನೇಳು ವರ್ಷದಿಂದ ಕಲಾ ಸೇವೆಯಲ್ಲಿ ತೋಡಗಿಕೊಂಡಿದ್ದಾರೆ.ಇವರು ಯಕ್ಷಗಾನವಲ್ಲದೇ ನಾಟಕ ಹಾಗೂ ಧಾರವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಲೈಫ್‍ಕೊರ್ಪರ’ನಾಟಕದಲ್ಲಿ ಹಾಸ್ಯಕಲಾವಿದನಾಗಿ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತಿದ್ದ ‘ಪಾಪದ ಪಿರವು’, ‘ಸಜ್ಜಿಗೆ-ಬಜೆಲ್’ ಧಾರವಾಹಿಯಲ್ಲಿ ನಟಿಸಿದ್ದಾರೆ.

‘ಬಲೆತೆಲಿಪಾಲೆ’ ಪ್ರವೇಶಿಸಿದ ಪ್ರಥಮ ಯಕ್ಷಗಾನಕಲಾವಿದ ಎಂಬ ಹೆಗ್ಗಳಿಕೆ ಇವರದ್ದು, ಇವರ ಈ ಕಲಾ ಸಾಧನೆಗಾಗಿ ಹಲಾವರು ಬಿರುದುಗಳು ಅರಸಿ ಬಂದಿವೆ. ‘ಯಕ್ಷಬೊಳ್ಳಿ ಮತ್ತು ಯಕ್ಷ ಮಾಣಿಕ್ಯ’ ಇವರ ಅಭಿಮಾನಿಗಳು ಕೊಟ್ಟಂತಹ ಬಿರುದು. ಇವರ ಸಾಧನೆಯ ಶಿಖರ ಇಷ್ಟಕ್ಕೆ ಸೀಮಿತವಾಗದೇ ತುಳು ಭಾಷೆ-ಲಿಪಿ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ನಮ್ಮ ತುಳುನಾಡು ಟ್ರಸ್ಟ್ (ರಿ) ಮಂಗಳೂರು ಇದರಕಾರ್ಯಧ್ಯಕ್ಷರಾಗಿದ್ದುಕೊಂಡು ಸಮಾಜ ಸೇವೆಯಲ್ಲೂತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಸಿನಿಮಾರಂಗ ದತ್ತ ಹೆಜ್ಜೆಇಡಲು ತಯಾರಿ ನಡೆಸಿದ್ದಾರೆ. ‘ವಿಕ್ರಂತ್’ತುಳು ಸಿನಿಮಾದಲ್ಲಿ ತುಳು ಮಾಣಿಕ್ಯಅರವಿಂದ ಬೊಳಾರ್ ಜೊತೆ ಹಾಸ್ಯ ಪಾತ್ರದ ಮುಖಾಂತರ ಕೊಸ್ಟಲ್ ವುಡ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತತವಾದ ಪರಿಶ್ರಮ ಹಾಗೂ ಕಲಾ ಆಸಕ್ತಿ ನನ್ನನ್ನು ಬೆಳೆಸುತ್ತಿದೆ.ಎಂದು ನಗುನಗುತ್ತಲೇ ಹೇಳುತ್ತಾರೆ ಕಡಬ ದಿನೇಶ್‍ರೈ.

error: Content is protected !!

Join the Group

Join WhatsApp Group