ಕಚೇರಿ ಆಡಳಿತ ಮತ್ತು ರಿಟೈಲ್ ಸೇಲ್ಸ್ ಕೋರ್ಸ್ ಇದರ ವತಿಯಿಂದ ಉಚಿತ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.5.ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2019-20ನೇ ಸಾಲ್ಲಿನಲ್ಲಿ ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್, ಐಸಿಐಸಿಐ ಫೌಂಡೇಶನ್ ಬೆಂಗಳೂರು ಸಂಸ್ಥೆಯು ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಅತ್ಯಂತ ಬೇಡಿಕೆಯಲ್ಲಿರುವ ಆಫೀಸ್ ಅಡ್ಮಿನಿಸ್ಟ್ರೇಷನ್ ಮತ್ತು ರಿಟೈಲ್ ಸೇಲ್ಸ್ ಕೋರ್ಸ್‍ಗಳಿಗೆ ಉಚಿತ ತರಬೇತಿ ನೀಡುತ್ತಿದೆ.

10ನೇ ತರಗತಿ ಪಾಸಾಗಿರುವ, ಪಿ.ಯು.ಸಿ ಹಾಗೂ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ, 18 ರಿಂದ 30 ವರ್ಷ ವಯಸ್ಸಿನ ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಈ ಕೋರ್ಸ್‍ಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಕೋರ್ಸ್ 3 ತಿಂಗಳ ಅವಧಿಯಾಗಿದ್ದು, ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ. ಎರಡು ಜೊತೆ ಸಮವಸ್ತ್ರ, ಒಂದು ಹೊತ್ತಿನ ಊಟದ ವ್ಯವಸ್ಥೆ ಈ ಸಂಸ್ಥೆಯಿಂದಲೇ ನೀಡಲಾಗುತ್ತಿದೆ. ಕೋರ್ಸ್ ಮುಕ್ತಾಯಗೊಳ್ಳುವ ವೇಳೆಗೆ ತರಬೇತಿ ಪಡೆದ ಅಭ್ಯರ್ಥಿಗಳ ಕಾರ್ಯಕ್ಷಮತೆ ಮೇರೆಗೆ ಉದ್ಯೋಗಾವಕಾಶವನ್ನು ಸಹ ಒದಗಿಸಲು ಅಗತ್ಯ ಕ್ರಮ ಈ ಸಂಸ್ಥೆಯು ವಹಿಸುತ್ತದೆ.

ಈ ಮೇಲೆ ತಿಳಿಸಿರುವ ಕೋರ್ಸ್‍ಗಳಲ್ಲಿ ಸ್ಫೋಕನ್ ಇಂಗ್ಲೀಷ್, ಕಂಪ್ಯೂಟರ್ ಬೇಸಿಕ್ ಜಿ.ಎಸ್.ಟಿ., ಟ್ಯಾಲಿ ಆಂಡ್ ಅಕೌಂಟ್ಸ್, ಬ್ಯಾಂಕಿಂಗ್, ಕಮ್ಯೂನಿಕೇಶನ್ ಆ್ಯಂಡ್ ಪರ್ಸಿನಾಲಿಟೀ ಡೆವೆಲಪ್‍ಮೆಂಟ್ ಸ್ಕಿಲ್ಸ್, ಲೈಫ್ ಸ್ಕಿಲ್ಸ್, ಇಂಟವ್ಯೂ ಸ್ಕಿಲ್ಸ್, ಕಸ್ಟಮರ್ ಸರ್ವೀಸ್, ರಿಟೆಲ್ ಸೇಲ್ಸ್, ಎಟಿಕ್ಯೂಟಿ ಆ್ಯಂಡ್ ಗ್ರೂಮಿಂಗ್ ಸ್ಟ್ಯಾಂಡರ್ಸ್ ಈ ವಿಷಯಗಳಡಿ ತರಬೇತಿ ನೀಡಲಾಗುವುದು. ಸಂಸ್ಥೆಯ ತರಬೇತಿ ಕೇಂದ್ರವು ಬೆಂಗಳೂರು ಮತ್ತು ಮೈಸೂರು ನಗರದಲ್ಲಿರುತ್ತವೆ. ತರಬೇತಿ ಅವಧಿಯಲ್ಲಿ ನಿಗಮದ ವತಿಯಿಂದ ಸ್ಥಳೀಯವಾಗಿ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ರೂ.1200/- ಪ್ರಯಾಣ ವೆಚ್ಚ ಹಾಗೂ ಬೇರೆ ಜಿಲ್ಲೆಗಳಿಂದ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ರೂ.5000/- ವಸತಿ ವೆಚ್ಚವಾಗಿ ಅಭ್ಯರ್ಥಿಗಳ ಖಾತೆಗೆ ನೇರವಾಗಿ ಪಾವತಿಸಲಾಗುವುದು.

Also Read  ಕ್ರೀಡಾ ಕ್ಷೇತ್ರದತ್ತ ಮುಖಮಾಡಿದ ಕೊರೊನಾ ➤ ಟೆನಿಸಿಗ ಜೊಕೋವಿಕ್‍ಗೂ ಕೊರೊನಾ

ಅಭ್ಯರ್ಥಿಗಳು ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಕಡ್ಡಾಯವಾಗಿ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಆಧಾರ್ ಕಾರ್ಡ್, ಪಡಿತರ ಚೀಟಿ, 2 ಬಾವಚಿತ್ರ ಹಾಗೂ ಬ್ಯಾಂಕ್ ಜೆರಾಕ್ಸ್‍ಗಳೊಂದಿಗೆ ಅಕ್ಟೋಬರ್ 31 ರೊಳಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಜನತಾ ಬಜಾರ್ ಕಟ್ಟಡ, 2ನೇ ಮಹಡಿ, ಜಿ.ಎಚ್.ಎಸ್ ರಸ್ತೆ ಮಂಗಳೂರು ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:-0824-2420114 ನ್ನು ಸಂಪರ್ಕಿಸಬೇಕು ಎಂದು ಜಿಲ್ಲಾವ್ಯವಸ್ಥಾಪಕರು ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಬಿದ್ದು ಸಿಕ್ಕಿದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಮಹಿಮಾ ಮಾಲಕ

error: Content is protected !!
Scroll to Top