ಅ. 9ರಂದು ಅತಿಥಿ ಶಿಕ್ಷಕರ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.5.ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಲು ಅತಿಥಿ ಶಿಕ್ಷಕರಿಂದ ನೇಮಕ ಮಾಡಲಿದೆ.

ಪ್ರಾಥಮಿಕ ಸಹ ಶಿಕ್ಷಕ/ಪದವೀಧರ ಸಹ ಶಿಕ್ಷಕ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಿದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 9 ರಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಲ್ಮಠ, ಜ್ಯೋತಿಚಿತ್ರ ಮಂದಿರದ ಹತ್ತಿರ ಇಲ್ಲಿ ಶೈಕ್ಷಣಿಕ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಹಳೆನೇರೆಂಕಿ ನಫೀಸತುಲ್ ಮಿಸ್ರಿಯಾ ದುವಾ ಕಾಲೇಜು ವಾರ್ಷಿಕೋತ್ಸವ ➤ ಆಧ್ಯಾತ್ಮಿಕ ಮಜ್ಲಿಸುನ್ನೂರು ಸಂಗಮ, ಏಕದಿನ ಧಾರ್ಮಿಕ ಪ್ರಭಾಷಣ

error: Content is protected !!
Scroll to Top