ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.2019-20ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

(2018-19 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. 2019-20ನೇ ಸಾಲಿನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.) ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 31. ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿರಬೇಕು. 1ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಯ ಷೋಷಕರ ಕುಟುಂಬದ ಆದಾಯ ಮಿತಿ ವಾರ್ಷಿಕ ರೂ.6 ಲಕ್ಷಗಳ ಮಿತಿಯೊಳಗೆ ಇರಬೇಕು. 9ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಯ ಷೋಷಕರ ಕುಟುಂಬದ ಆದಾಯ ಮಿತಿ ವಾರ್ಷಿಕ ರೂ.2.5 ಲಕ್ಷಗಳ ಮಿತಿಯೊಳಗೆ ಇರಬೇಕು.

Also Read  ಅಪಘಾತದ ಗಾಯಾಳುವನ್ನು ತನ್ನ ಸ್ಕೂಟರ್ ನಲ್ಲೇ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೇದೆ..! ಕಮಿಷನರ್ ಅನುಪಮ್ ಅಗರ್ವಾಲ್ ಶ್ಲಾಘನೆ


ಸಲ್ಲಿಸಬೇಕಾಗಿರುವ ದಾಖಲೆಗಳು : ವಿದ್ಯಾರ್ಥಿಯ SATS-ID (ಸಂಬಂಧಪಟ್ಟ ಶಾಲೆಗಳಿಂದ). ವಿದ್ಯಾರ್ಥಿಯ ಆಧಾರ್/ಇ.ಐ.ಡಿ ಸಂಖ್ಯೆ ಹಾಗೂ ಆಧಾರ್/ಇ.ಐ.ಡಿಯಲ್ಲಿ ನಮೂದಿಸಿರುವಂತೆ ಹೆಸರು. ವಿದ್ಯಾರ್ಥಿಯ ಆಧಾರ್ ಇಲ್ಲದಿದ್ದಲ್ಲಿ, ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ವಿವರ (ಬ್ಯಾಂಕ್ ಹೆಸರು, ಬ್ಯಾಂಕ್ ವಿಳಾಸ, ಐ.ಎಫ್.ಎಸ್.ಸಿ.ಕೋಡ್, ಖಾತೆ ಸಂಖ್ಯೆ). ವಿದ್ಯಾರ್ಥಿಯ ಹೆಸರಿನಲ್ಲಿ ನೀಡಲಾದ ಗಣಕೀಕೃತ ಜಾತಿ ಮತ್ತು ಆದಾಯ ಪ್ರಯಾಣ ಪತ್ರಗಳ ಆರ್‍ಡಿ ಸಂಖ್ಯೆಗಳು. ವಸತಿ ನಿಲಯಾರ್ಥಿಯಾಗಿದ್ದಲ್ಲಿ ವಸತಿ ನಿಲಯ ನಿರ್ವಹಣೆ ತಂತ್ರಾಂಶದ ನೋಂದಣಿ ಸಂಖ್ಯೆ (HMIS).ಹೆಚ್ಚಿನ ಮಾಹಿತಿಗಾಗಿ ಮಂಗಳೂರು- 0824-2423619 ಬಂಟ್ವಾಳ-08255-230968 ಪುತ್ತೂರು-08251-236803 ಬೆಳ್ತಂಗಡಿ-08256-233528 ಸುಳ್ಯ-08257-233527ನ್ನು ಸಂಪರ್ಕಿಸಲು ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ದ.ಕ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಹಸಿರು ಪಟಾಕಿಗಳ ಮಾರಾಟ 10 ದಿನ ಮಾತ್ರ ಅವಕಾಶ ➤ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

error: Content is protected !!
Scroll to Top