ಪ.ಜಾತಿ/ಪ.ಪಂಗಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್‍ಪೂರ್ವ (1ನೇ ತರಗತಿಯಿಂದ 10ನೇ ತರಗತಿ) ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಶಾಲೆಗಳಲ್ಲಿ ಸ್ಯಾಟ್ಸ್ ನಂಬರ್‍ನೊಂದಿಗೆ ಅರ್ಜಿ ಸಲ್ಲಿಸಬೇಕು. ನವೀಕರಣದ ವಿದ್ಯಾರ್ಥಿಗಳ ಅರ್ಜಿಗಳು ಸ್ವಯಂ ನವೀಕರಣ ಆಗಿರುವುದರಿಂದ ಆನ್‍ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಾತ್ರ ಇಲಾಖೆಯ ವೆಬ್ ಸೈಟ್: www.ssp.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹೊಸದು ಮತ್ತು ನವೀಕರಣ ವಿದ್ಯಾರ್ಥಿಗಳ ಹೆಸರು ಮತ್ತು ಸ್ಯಾಟ್ಸ್ ನಂಬರ್ ವಿವರಗಳ ಪಟ್ಟಿಯನ್ನು ಸಹಾಯಕ ನಿರ್ದೇಶಕರು(ಗ್ರೇಡ್ 1), ಸಮಾಜ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಇಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Also Read  ವಯನಾಡು- ಭೂಕುಸಿತದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಯುವತಿಗೆ ಬಿಗ್ ಶಾಕ್ - ಮದುವೆಯಾಗಲಿರುವ ಯುವಕ ಅಪಘಾತದಲ್ಲಿ ಮೃತ್ಯು...!

error: Content is protected !!
Scroll to Top