ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಬಾಡಿಗೆಗೆ ವಾಹನ ಒದಗಿಸಲು ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.2019-20ನೇ ಸಾಲಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮಂಗಳೂರು ಇವರ ಕಚೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ.

ಮಾಸಿಕ ಬಾಡಿಗೆಗೆ ವಾಹನ ಒದಗಿಸಲು ಹಾಗೂ ಕಚೇರಿಯ ಪತ್ರ ವ್ಯವಹಾರಗಳನ್ನು ಗಣಕ ಯಂತ್ರಗಳಲ್ಲಿ ಬೆರಳಚ್ಚು ಮಾಡುವ ಮತ್ತು ಪ್ರಿಂಟ್ ಪ್ರತಿ ಸಿದ್ದಪಡಿಸಿ ಕೊಡುವ ಸೇವೆಯನ್ನು ಒದಗಿಸಲು ಆಸಕ್ತ ನೋಂದಾಯಿತ ಸಂಸ್ಥೆ/ ಏಜನ್ಸಿಗಳಿಂದ ಟೆಂಡರನ್ನು ಆಹ್ವಾನಿಸಲಾಗಿದೆ. ವಾಹನ ಒದಗಿಸುವ ಬಗ್ಗೆ ಟೆಂಡರ್ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್ 18ರಂದು ಸಂಜೆ 4 ಗಂಟೆ. ಬೆರಳಚ್ಚು ಸೇವೆ ಒದಗಿಸುವ ಬಗ್ಗೆ ಟೆಂಡರ್ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್ 19ರಂದು, ಸಂಜೆ 4 ಗಂಟೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0824-2423615 ನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಪ್ರತಿ ಕೆಜಿಗೆ 250ರ ಗಡಿದಾಟಿದ 'ಕಿಚನ್ ಕ್ವೀನ್' - ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ

error: Content is protected !!
Scroll to Top