(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.27.ಜಿಲ್ಲಾ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಯಿಂದ ಗೃಹರಕ್ಷಕರಿಗೆ ವೈದ್ಯಕೀಯ ಸಹಾಯ ಧನ ನೀಡಲಾಯಿತು.
ಪ್ರತಿಯೊಬ್ಬ ಗೃಹರಕ್ಷಕರಿಗೂ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿ ಇದ್ದು, ಇದರಲ್ಲಿ ಗೃಹರಕ್ಷಕರ ಹಾಗೂ ಅವರ ಮಕ್ಕಳ ವೈದ್ಯಕೀಯ ವೆಚ್ಚ ಹಾಗೂ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಹಾಯ ಧನ ನೀಡಲಾಗುತ್ತದೆ. ಇದರಲ್ಲಿ ಪ್ರತಿ ಗೃಹರಕ್ಷಕರೂ ವರ್ಷಕ್ಕೆ ರೂ.50 ರಂತೆ ವಂತಿಕೆಯನ್ನು ನೀಡಿದ್ದು ಶೇಕಡಾ 60 ರಷ್ಟು ಗೃಹರಕ್ಷಕರೂ ಕವಾಯತಿಗೆ ಹಾಜರಾಗಿದ್ದಲ್ಲಿ ಅಂತಹ ಗೃಹರಕ್ಷಕರು ಈ ಸೌಲಭ್ಯವನ್ನು ಪಡೆಯಬಹುದು.
ವೈದ್ಯಕೀಯ ವೆಚ್ಚಕ್ಕಾಗಿ ಅರ್ಜಿ ಸಲ್ಲಿಸುವಾಗ ಆಸ್ಪತ್ರೆಗೆ ದಾಖಲಾಗಿರುವ ಬಿಲ್ಲುಗಳು ಹಾಗೂ ಔಷಧಿ ಬಿಲ್ಲುಗಳಿಗೆ ವೈದ್ಯರ ಸಹಿ ಹಾಗೂ ಮೊಹರಿನೊಂದಿಗೆ ಜಿಲ್ಲಾ ಗೃಹರಕ್ಷಕ ದಳದ ಕಚೇರಿಗೆ ನೀಡಿದಲ್ಲಿ ಅದನ್ನು ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಿ ಕಳುಹಿಸಲಾಗುವುದು. ಗೃಹರಕ್ಷಕರಾದ ಸುಖಿತಾ ಎ ಶೆಟ್ಟಿ ಹಾಗೂ ದೀಕ್ಷಾ ಕೆ. ವರಿಗೆ ಸಹಾಯಧನ ವಿತರಿಸಲಾಯಿತು.ಹಿಂದಿನ ಮೂರು ವರ್ಷ ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ವಂತಿಗೆಯನ್ನು ನೀಡಿರುವ ಗೃಹರಕ್ಷಕರು ಹಾಗೂ ಶೇಕಡಾ 60 ರಷ್ಟು ಕವಾಯತಿಗೆ ಹಾಜರಾಗಿರುವ ಗೃಹರಕ್ಷಕರು ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.