ರುಡ್ ಸೆಟ್ ಸಂಸ್ಥೆ, ಉಜಿರೆ ಇದರ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ರುಡ್‍ಸೆಟ್ ಸಂಸ್ಥೆ, ಉಜಿರೆಯಲ್ಲಿ ಅಕ್ಟೋಬರ್ 10 ರಿಂದ ನವೆಂಬರ್ 24 ರವರೆಗೆ ಉಚಿತ ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಈ ಕ್ಷೇತ್ರದಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಆಸಕ್ತಿ ಇರುವ ಅಭ್ಯರ್ಥಿಗಳು ಅಕ್ಟೋಬರ್ 5 ರಂದು ರುಡ್‍ಸೆಟ್ ಸಂಸ್ಥೆ, ಉಜಿರೆಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ತರಬೇತಿಗೆ ಪಡೆಯಲು 18 ರಿಂದ 45 ವರ್ಷಗಳ ವಯೋಮಿತಿ, ಕನ್ನಡ ಓದು ಬರಹ ಬಲ್ಲ ಯುವಕರು ಸಂಸ್ಥೆಯ ಅರ್ಜಿ ನಮೂನೆಯಲ್ಲಿ  ಸಲ್ಲಿಸಬಹುದು.

ಅಥವಾ ಬಿಳಿ ಹಾಳೆಯಲ್ಲಿ ಭರ್ತಿ ಮಾಡಿ ನಿರ್ದೇಶಕರು, ರುಡ್‍ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ 574 240, ಬೆಳ್ತಂಗಡಿ ತಾಲೂಕು, ಇವರಿಗೆ ಕಳುಹಿಸಬಹುದು ಅಥವಾ ಸಂಸ್ಥೆಯ online ವೆಬ್‍ಸೈಟ್ ಮೂಲಕ www.rudsetujire.com  ಗೆ ಅರ್ಜಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಲು ರುಡ್‍ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇವರ ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: 'ಸಿದ್ದರಾಮಯ್ಯರಿಂದ 24 ಹಿಂದೂಗಳ ಹತ್ಯೆ' ➤ ವಿವಾದಾತ್ಮಕ ಹೇಳಿಕೆ ನೀಡಿದ ಪೂಂಜಾ

error: Content is protected !!
Scroll to Top