(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ 23.09.2019ರಂದು ‘ಹಿಂದಿ ದಿವಸ’ ಕಾರ್ಯಕ್ರಮಜರುಗಿತು.
ಕಾರ್ಯಕ್ರಮವನ್ನುದ್ದೇಶಿಸಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿಧ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗ ಮುಖ್ಯಸ್ಥೆಡಾ. ಸುಮ ಟಿ.ಆರ್‍ಅವರು ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ದಿನಗಳಿಂದಲೂ ಹಿಂದಿ ಭಾಷೆಯುತನ್ನ ಸೇವೆ ಹಾಗೂ ಕೊಡುಗೆ ನೀಡುತ್ತಾ ಬಂದಿದೆ. ವಂದೇ ಮಾತರಂ, ಭಾರತ್ ಮಾತಾಕೀಜೈ ನಾನಾ ಸಂದೇಶಗಳು ಹಿಂದಿ ಭಾಷೆಯ ಮೂಲಕವೇ ವ್ಯಕ್ತವಾಗಿವೆಎಂದರು.
ಮತ್ತೊಬ್ಬ ಮುಖ್ಯಅತಿಥಿ ವಿಶ್ವವಿದ್ಯಾಲಯಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆಡಾ. ನಾಗರತ್ನರಾವ್‍ಇವರು ಮಾತನಾಡಿ ಭಾಷೆ ಹರಿಯುವ ನದಿಯಿದ್ದಂತೆ.
ನದಿ ಹರಿಯುವಾಗ ಅನೇಕ ಹಳ್ಳಕೊಳ್ಳಗಳನ್ನು ಸೇರಿಸಿಕೊಳ್ಳುವಂತೆ ಅನೇಕ ಭಾಷೆಗಳ ಸತ್ವ ಹೀರಿ ಹಿಂದಿ ಸಮೃದ್ಧ ಭಾಷೆಯಾಗಿದೆಎಂದುಅಭಿಪ್ರಾಯಪಟ್ಟರು.ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥಡಾ. ಮುರಳೀಧರ ನಾೈಕ್‍ಅವರು ಮಾತನಾಡಿ, ತಾಯಿಭಾಷೆಯಜೊತೆಗೆಎಲ್ಲ ಭಾಷೆಗಳ ಜ್ಞಾನ ಹೊಂದಬೇಕಲ್ಲದೆಇತರೆ ಭಾಷೆಗಳನ್ನು ಗೌರವಿಸಬೇಕು ಎಂದು ಹೇಳಿದರು.ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನಅಧ್ಯಕ್ಷ ಶ್ರೀ ಕೆ.ಸಿ ನಾೈಕ್‍ಅಧ್ಯಕ್ಷತೆ ವಹಿಸಿಎಲ್ಲಾ ಭಾಷೆಗಳಿಗೂ ಸಮಾನ ಮಹತ್ವ ನೀಡಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರಜಿ.ಎಸ್ ಸ್ವಾಗತಿಸಿದರು. ಸಂಸ್ಥೆಯಅಭಿವೃದ್ಧಿಅಧಿಕಾರಿ ನಸೀಮ್ ಬಾನು, ಆಡಳಿತ ಅಧಿಕಾರಿ ಬೈಕಾಡಿಜನಾರ್ದನಆಚಾರ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾಕಾಮತ್ ಜಿ. ಮಂಗಳೂರಿನ ವಿದ್ಯಾಇಲಾಖೆಯಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳಾದ ಶ್ರೀಮತಿ ಕುಸುಮ ಮತ್ತು ಶ್ರೀಮತಿ ಗೀತ ಉಪಸ್ಥಿತರಿದ್ದರು. ವಿದ್ಯಾರ್ಥಿಅಭಿಮಾನ್ ವಂದಿಸಿ, ವಿದ್ಯಾರ್ಥಿನಿ ಅಲ್ಮಾಸ್‍ಕಾರ್ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.