ಸಾಮೂಹಿಕ ಸ್ವಚ್ಚತಾ ಕಾರ್ಯಕ್ರಮ ಪರಿಣಾಮಕಾರಿ ➤ ಶಾಸಕ ವೇದವ್ಯಾಸ ಕಾಮತ್

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಎಂ ಆರ್ ಪಿ ಎಲ್ ಸಹಯೋಗದೊಂದಿಗೆ ಭಾನುವಾರ ಸ್ವಚ್ಚತಾ ಜನ ಜಾಗರಣ ಅಭಿಯಾನ ಹಮ್ಮಿಕೊಳ್ಳಲಾಯಿತು. ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅಮೃತ ಜ್ಯೋತಿ ಬೆಳಗಿ ಚಾಲನೆ ನೀಡಿದರು.


ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಈ ಸಂದರ್ಭದಲ್ಲಿ ಮಾತನಾಡಿ ಸ್ವಚ್ಚ ಭಾರತ, ಸ್ವಚ್ಚ ಮಂಗಳೂರಿನ ಬಗ್ಗೆ ಮಠಗಳ ಪ್ರಯತ್ನ ಶ್ಲಾಘನೀಯ, 2000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿರುವ ಪರಿಣಾಮ ಇಂದು ಹೆಚ್ಚಿನ ಜನರಲ್ಲಿ ವಿಶೇಷವಾಗಿ ಸಣ್ಣ ಮಕ್ಕಳಲ್ಲಿ ವ್ಯಕ್ತವಾಗುತ್ತಿರುವುದು ಸಂತೃಪ್ತಿ ತಂದಿದೆ. ಹಸಿರು ಪರಿಸರದ ಪ್ರಮಾಣ ಇಳಿಮುಖವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂದೆ ಮನೆಗೆ ಲೈಸೆನ್ಸ್ ನೀಡುವಾಗ ಕನಿಷ್ಟ 2 ಗಿಡ ನೀಡಬೇಕೆಂದು ಕಡ್ಡಾಯಗೊಳಿಸುವ ಅಗತ್ಯವಿದೆ ಎಂದರು.ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಎಲ್ಲರ ಸಹಕಾರ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ದುಷ್ಪರಿಣಾಮ ಉಂಟುಮಾಡುವ ಏಕ ಬಳಕೆ ಪ್ಲಾಸ್ಟಿಕ್ ಉಪಯೋಗ ಮಾಡದಿರುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು.

Also Read  ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ

ವಿನೀತ ರೈ ಪ್ರತಿಜ್ಞಾವಿಧಿ ಬೋಧನೆ ಮಾಡಿದರು.ಎಂ.ಆರ್ ಪಿ ಎಲ್ ಮಹಾಪ್ರಬಂಧಕ ಸುಬ್ರಾಯ ಭಟ್ ಮತ್ತು ಪ್ರಬಂಧಕಿ ವೀಣಾ ಶೆಟ್ಟಿ ಭಾಗವಹಿಸಿದ್ದರು.ವೇದಿಕೆಯಲ್ಲಿ ಕೆನರಾ ಕಾಲೇಜಿನ ಪ್ರೊಫೆಸರ್ ದೇಜಮ್ಮ , ಪ್ರೊಫೆಸರ್ ವಿಂದ್ಯಾ, ಶಾರದಾ ವಿದ್ಯಾಲಯದ ಉಪನ್ಯಾಸಕಿ ವನಿತಾ, ಅಮಲ ಭಾರತ ಅಭಿಯಾನದ ಅಧ್ಯಕ್ಷ ಡಾ.ಜೀವರಾಜ್ ಸೊರಕೆ, ಪ್ರಸಾದ್ ರಾಜ್ ಕಾಂಚನ್ ಉಪಸ್ಥಿತರಿದ್ದರು.ಕೆನರಾ ಕಾಲೇಜು, ಶಾರದಾ ಕಾಲೇಜು, ಕಾರ್ಮೆಲ್ ಕಾಲೇಜು, ಮೊಡಂಕಾಪುಗಳ ವಿದ್ಯಾರ್ಥಿಗಳು ಹಾಗೂ ಎಂಆರ್ ಪಿ ಎಲ್ ಅಧಿಕಾರಿಗಳು, ಸಿಬ್ಬಂದಿಗಳು,ಇನ್ನಿತರರು ಭಾಗವಹಿಸಿ ಸುಲ್ತಾನ್ ಬತ್ತೇರಿ ನದಿಕಿನಾರೆ, ಬೋಳೂರು, ಮಠದ ಕಣಿ ಹಾಗೂ ಉರ್ವ ಪರಿಸರದದಲ್ಲಿ ವಿವಿಧ ತಂಡಗಳು ಸೇರಿ ಸ್ವಚ್ಚ ಗೊಳಿಸಿದರು. ಪರಿಸರದ ಜನರಿಗೆ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಲಾಯಿತು.

Also Read  ಕಡಬ: ತಹಶೀಲ್ದಾರ್ ನೇತೃತ್ವದಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ

error: Content is protected !!
Scroll to Top