ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಬಂಟ್ವಾಳ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಆನ್‍ಲೈನ್  www.anganwadirecruit.kar.nic.in ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 19 ರಂದು ಸಂಜೆ 5.30 ಗಂಟೆ.


ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆ :-ಕರ್ಪೆ ಗ್ರಾಮ-ಕರ್ಪೆಕುಟ್ಟಿಕಳ ಅಂಗನವಾಡಿ ಕೇಂದ್ರ, ಸರಪಾಡಿ ಗ್ರಾಮ- ಪಾದಿಲ ಅಂಗನವಾಡಿ ಕೇಂದ್ರ, ಬಿ.ಕಸಬಾ ಗ್ರಾಮ- ಲೊರೆಟ್ಟೊಪದವು ಅಂಗನವಾಡಿ ಕೇಂದ್ರ.

Gems

ಖಾಲಿಯಿರುವ ಅಂಗನವಾಡಿ ಸಹಾಯಕಿ ಹುದ್ದೆ : ತುಂಬೆ ಗ್ರಾಮ –ತುಂಬೆಶಾಲೆ ಅಂಗನವಾಡಿ ಕೇಂದ್ರ, ಕಾವಳಮೂಡೂರು ಗ್ರಾಂ- ಕಾಂದ್ರೋಡಿ ಅಂಗನವಾಡಿ ಕೇಂದ್ರ, ಬಿ ಮೂಡ ಗ್ರಾಂ- ಪರಾರಿ ಅಂಗನವಾಡಿ ಕೇಂದ್ರ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃಧ್ಧಿ ಯೋಜನಾ ಕಚೇರಿ ಕೈಕುಂಜೆ ಬಿ.ಸಿರೋಡ್ ದೂರವಾಣಿ ಸಂಖ್ಯೆ: 08255-232465 ಇಲ್ಲಿ ಸಂಪರ್ಕಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಹೋಟೆಲ್ ಶೌಚಾಲಯ ಬಳಕೆಕೆ ಆಕ್ಷೇಪಣೆ ► ತಂಡದಿಂದ ಮಾರಣಾಂತಿಕ ಹಲ್ಲೆ

error: Content is protected !!
Scroll to Top