ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ಸ್ಥಗಿತ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ 33 ಕೆವಿ ವಿದ್ಯುತ್ ತಂತಿಗಳನ್ನು ಮೆಸ್ಕಾಂ ವತಿಯಿಂದ ಬದಲಾಯಿಸಿ ಹೊಸ ಕೇಬಲ್ ಅಳವಡಿಸುವ ಕಾರ್ಯವನ್ನುಇಂದು  ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಅವಧಿಯಲ್ಲಿ ತುಂಬೆ ಎಚ್.ಎಲ್.ಪಿ.ಎಸ್-2 ಹಾಗೂ ಎಲ್.ಎಲ್.ಪಿ,ಎಸ್-2 ಸ್ಥಾವರಗಳಿಗೆ ವಿದ್ಯುತ್ ನಿಲುಗಡೆಗೊಳ್ಳುವುದರಿಂದ ನೀರು ಸರಬರಾಜು ನಿಲುಗಡೆಗೊಳಿಸಿರುವುದು. ಇದರಿಂದ ಮಂಗಳೂರು ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ನಿಲುಗಡೆಗೊಳ್ಳುವುದು ಎಂದು ಕಾರ್ಯಪಾಲಕ ಅಭಿಯಂತರರ ಮಹಾನಗರಪಾಲಿಕೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ’ಕಾಂಗ್ರೆಸ್ಸಿನವರದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯೇ- ಸರಕಾರಿ ಪ್ರಾಯೋಜಿತ ಬೆದರಿಕೆಯೇ’        ಸಿ.ಟಿ. ರವಿ ಪ್ರಶ್ನೆ

error: Content is protected !!
Scroll to Top