(ನ್ಯೂಸ್ ಕಡಬ) newskadaba.com ವೇಣೂರು ,ಸಪ್ಟೆಂಬರ್.23.ಸವಿತಾ ಗಣೇಶ್ (26) ಎಂಬಾಕೆ ಅವರ ಗಂಡ ಗಣೇಶ ಹಾಗೂ ತಾಯಿ, ಮತ್ತು ಒಂದು ಮಗುವಿನೊಂದಿಗೆ ಸುಮಾರು ಒಂದು ವರ್ಷದಿಂದ ಬಡಗಕಾರಂದೂರು ಗ್ರಾಮದ ನಲ್ಕಂಡ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅವರ ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದರು.
ಎಂದಿನಂತೆ ಗಂಡ ಗಣೇಶನು ಕೂಲಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದು, ಸಂಜೆವೇಳೆಗೆ ಬಡಗಕಾರಂದೂರು ಗ್ರಾಮದ ನಡಾಯಿಬೈಲು ಎಂಬಲ್ಲಿ ಶೇಖರ ದೇವಾಡಿಗ ಎಂಬವರ ಗದ್ದೆಯ ಬದಿಯಲ್ಲಿ ಹರಿಯುವ ಕಣಿಯ ನೀರಿಗೆ ಬಿದ್ದು ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಗಣೇಶನು ಗದ್ದೆಯ ಬದಿಯಲ್ಲಿ ನಡೆದು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಅಥವಾ ಇನ್ಯಾವುದೋ ಕಾರಣದಿಂದ ಗದ್ದೆ ಬದಿಯಲ್ಲಿ ಹರಿಯುತ್ತಿದ್ದ ಕಣಿಯ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.