ಜೀವ ಬೆದರಿಕೆ ಪ್ರಕರಣ

(ನ್ಯೂಸ್ ಕಡಬ) newskadaba.com ಬೆಳ್ಳಾರೆ,ಸಪ್ಟೆಂಬರ್.23.ಬೆಳ್ಳಾರೆ ಬಸ್ಸ್ ನಿಲ್ದಾಣದ ಬಳಿ ಇರುವ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಅಬ್ದುಲ್ ಖಾದರ್ ಎಂಬವರು ಮೂವರು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದಾರೆ.

ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಒಟ್ಟು ಸೇರಿ ಈ ಪ್ರಕರಣದ ಅಬ್ದುಲ್ ಖಾದಿರ್ ಎಂಬವರ ತಲೆಯ ಹಿಂಬದಿಗೆ ಜಮಾಲ್ ಮಣಿಮಜಲು ಎಂಬಾತ ಹಾಗೂ ಆತನ ಜೊತೆಗಿದ್ದ ಅಜರುದ್ದೀನ್ ಹಾಗೂ ಸೂಫಿರವರು ಹೆಲ್ಮಟ್ ನಿಂದ ಹೊಡೆದು ನೆಲಕ್ಕೆ ಬಿದ್ದ ಅಬ್ದುಲ್ ಖಾದಿರ್ ರವರು ಮೇಲೇಳದಂತೆ ಹಿಡಿದುಕೊಂಡು ಈ ಕುರಿತು ದೂರು ನೀಡಿದರೆ ನೋಡಿಕೊಳ್ಳುತ್ತೇವೆ ಎಂಬುದಾಗಿ ಬೆದರಿಕೆಯನ್ನೊಡ್ಡಿರುವುದಾಗಿ ದೂರುನೀಡಿದ್ದಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಚೈತ್ರಾ ಕುಂದಾಪುರ ಮತ್ತು ಸಹಚರರಿಗೆ ಜಾಮೀನು ಮಂಜೂರು ► ಜಾಮೀನು ದೊರೆತರೂ ಬುಧವಾರ ಜೈಲಿನಿಂದ ಹೊರ ಬರುವ ಸಾಧ್ಯತೆ..!!

error: Content is protected !!
Scroll to Top