ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಹುದ್ದೆ ➤ ವಿಕಲಚೇತನರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.23.ಬಂಟ್ವಾಳ ತಾಲೂಕಿನ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಒಬ್ಬರಂತೆ ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ನೇಮಕ ಮಾಡಲು ಅವಕಾಶವಿದೆ.

ಅವರಿಗೆ ಮಾಸಿಕ ರೂ.3000/- ಗೌರವಧನವನ್ನು ನೀಡಲಾಗುತ್ತದೆ. ಗೋಳ್ತಮಜಲು, ಕರಿಯಂಗಳ, ಕಳ್ಳಿಗೆ, ಅಮ್ಮುಂಜೆ, ನರಿಕೊಂಬು, ಇರ್ವತ್ತೂರು, ಸಜೀಪಮುನ್ನೂರು, ಬಡಗಬೆಳ್ಳೂರು, ಬಾಳ್ತಿಲ, ಕಾವಳಪಡೂರು, ನಾವೂರು, ಪಂಜಿಕಲ್ಲು, ಸಜೀಪಮೂಡ, ಸಂಗಬೆಟ್ಟು, ಉಳಿ, ಬಾಳೆಪುಣಿ, ಪುದು, ತುಂಬೆ, ಕುರ್ನಾಡು, ಫಜೀರು, ಸಜಿಪನಡು, ಸಜೀಪಪಡು, ಮೇರಮಜಲುಗ್ರಾಮ ಪಂಚಾಯತ್‍ಗಳಲ್ಲಿ ಹುದ್ದೆ ಖಾಲಿಯಿದೆ, ಆಸಕ್ತ ವಿಕಲಚೇತನರು ಅಕ್ಟೋಬರ್ 14ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಬಂಟ್ವಾಳ ಕೈಕುಂಜೆ, ಬಿ.ಸಿರೋಡ್ ಬಂಟ್ವಾಳ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ.

Also Read  ಡೀಲರ್ ಮೇಲೆ ಹಲ್ಲೆ ಮಾಡಿ ಬೈಕ್ ದೋಚಿದ ಖದೀಮರು     ➤ 6 ಜನ ಆರೋಪಿಗಳ ಬಂಧನ               

error: Content is protected !!
Scroll to Top