ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.23.ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಎಲ್ಲಾ ಸಹಕಾರ ಸಂಘಗಳು/ಸೌಹಾರ್ದ ಸಹಕಾರ ಸಂಘಗಳು ಕಾಯಿದೆ ಹಾಗೂ ನಿಯಮಗಳನ್ವಯ 2019-20ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ಆಯ್ಕೆ ಸಂಬಂಧ ವಾರ್ಷಿಕ ಮಹಾಸಭೆ ನಡೆಸಲಾಗಿತ್ತು.

ಈ ನಡವಳಿಯ ಯಥಾ ಪ್ರತಿಯನ್ನು ಮಹಾಸಭೆ ನಡೆದ 7 ದಿವಸದೊಳಗೆ ಉಪನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಕಿಲ್ಲೆಕೋರ್ಟ್ ಕಟ್ಟಡ, 3ನೇ ಅಂತಸ್ತು, ಪಿ.ಎಂ.ರಾವ್ ರಸ್ತೆ, ಹಂಪನಕಟ್ಟೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಕಚೇರಿಗೆ ಕಡ್ಡಾಯವಾಗಿ ಒಂದು ಪ್ರತಿಯನ್ನು ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮರ್ಧಾಳ: ಬೆಥನಿ ವಿಶೇಷ ಶಾಲೆಯ ಬಳಿ ಗುಡ್ಡಕ್ಕೆ ಬೆಂಕಿ

error: Content is protected !!
Scroll to Top