ವಿಟ್ಲ-ಅಂಗನವಾಡಿ ಸಹಾಯಕಿ ಹುದ್ದೆಗೆ-ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.23.ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 2 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್‍ನಲ್ಲಿ ಆರ್ಜಿ ಆಹ್ವಾನಿಸಲಾಗಿದೆ. ವೆಬ್‍ಸೈಟ್ ವಿಳಾಸ-www.anganwadirecruit.kar.nic.in . ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆಯ ದಿನ.

ಖಾಲಿಯಿರುವ ಅಂಗನವಾಡಿ ಸಹಾಯಕಿ ಹುದ್ದೆ : ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರಿಂಜ ಅಂಗನವಾಡಿ ಕೇಂದ್ರ, ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುರಿಬೈಲು ಶಾಲೆ. ಅಭ್ಯರ್ಥಿಗಳನ್ನು ಸಾಮಾನ್ಯ ಮೀಸಲಾತಿಯಲ್ಲಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದಿ ಯೋಜನೆ ವಿಟ್ಲ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರು ರಸ್ತೆ, ವಿಟ್ಲ ಇವರನ್ನು ಸಂಪರ್ಕಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ವಿಟ್ಲ ಇವರ ಪ್ರಕಟಣೆ ತಿಳಿಸಿದೆ.

Also Read  ಆಟೋರಿಕ್ಷಾದಲ್ಲಿ ಅಕ್ರಮ‌ ದನದ ಮಾಂಸ ಸಾಗಾಟ ➤ ಆರೋಪಿಯ ಸಹಿತ ರಿಕ್ಷಾ, ಮಾಂಸ ವಶಕ್ಕೆ

error: Content is protected !!
Scroll to Top