ಮುಂಬೈ: ಸ್ವಂತ ಮಗನನ್ನೇ ಉಸಿರುಗಟ್ಟಿ ಕೊಂದ ತಾಯಿ…!!!

(ನ್ಯೂಸ್ ಕಡಬ) newskadaba.com ಮುಂಬೈ, ಆ .18, ಮಗನ ದೌರ್ಜನ್ಯದಿಂದ ಬೇಸತ್ತ ತಾಯಿಯೊಬ್ಬಳು ಸೊಸೆಯನ್ನು ಕಾಪಾಡುವ ಸಲುವಾಗಿ ತನ್ನ ಸ್ವಂತ ಮಗನನ್ನೇ ಉಸಿರುಗಟ್ಟಿ ಸಾಯಿಸಿದ ಘಟನೆ ನಗರದ ಮಂಖುರ್ಡ್ ಪ್ರದೇಶದಿಂದ ವರದಿಯಾಗಿದೆ.

ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗನನ್ನು ಕೊಂದು ಮಹಿಳೆ ಅನ್ವರಿ ಇದ್ರೀಸಿ ಆತನ ಕಳೇಬರದೊಂದಿಗೆ ಇಡೀ ರಾತ್ರಿ ಕಳೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಾಯಿಯ ಕೈಯಿಂದಲೇ ಕೊಲೆಗೀಡಾದ ನದೀಂ ನೈಮ್ (25) ತನ್ನ ಪತ್ನಿ, ತಾಯಿ, ಇಬ್ಬರು ಹಿರಿಯ ಸೋದರರು ಮತ್ತವರ ಪತ್ನಿಯಂದಿರ ಜತೆ ಅಂಬೇಡ್ಕರ್ ಚಾಲ್ ನಲ್ಲಿ ವಾಸವಾಗಿದ್ದ. ಎರಡು ವರ್ಷಗಳ ಹಿಂದೆ ಆತ ಅಲಹಾಬಾದ್ ನ ಯುವತಿಯೊಬ್ಬಳೊಂದಿಗೆ ವಿವಾಹವಾಗಿದ್ದ. ಆತ ಅಮಲು ಪದಾರ್ಥ ವ್ಯಸನಿ ಎಂದು ಆಗ ಆಕೆಗೆ ತಿಳಿದಿರಲಿಲ್ಲ. ಆತನ ದೌರ್ಜನ್ಯದಿಂದ ಬೇಸತ್ತು ಆಕೆ ಮದುವೆಯಾಗಿ ಐದು ತಿಂಗಳಲ್ಲೇ ತನ್ನ ಗಂಡನ ಮನೆಯನ್ನು ತೊರೆದಿದ್ದಳು. ಆದರೆ ಮಗನಿಗೆ ಬುದ್ಧಿ ಹೇಳಿ ಸೊಸೆಯನ್ನು ಮನೆಗೆ ಕರೆಸಿಕೊಂಡಿದ್ದ ಅನ್ವರಿ ಇನ್ನು ಆತನಿಂದ ತೊಂದರೆಯಾದರೆ ತಾನು ಕಾಪಾಡುವುದಾಗಿ ಸೊಸೆಗೆ ಭರವಸೆ ನೀಡಿದ್ದಳು.

Also Read  ಮಂಗಳೂರಿನಲ್ಲಿ ತಡೆಗೋಡೆ ಕುಸಿತ: ಇಬ್ಬರು ಕಾರ್ಮಿಕರು ಮೃತ್ಯು

ಆದರೆ ಮಂಗಳವಾರ ರಾತ್ರಿ ನದೀಂ ಮದ್ಯದ ನಶೆಯಲ್ಲಿ ತೂರಾಡುತ್ತಾ ಮನೆಗೆ ಆಗಮಿಸಿದ್ದ. ಆಗ ಅನ್ವರಿ ತನ್ನ ಇತರ ಪುತ್ರರು ಮತ್ತು ಸೊಸೆಯಂದಿರನ್ನು ನೆರೆಮನೆಗೆ ಕಳುಹಿಸಿಕೊಟ್ಟಳು. ಇದನ್ನು ಸಹಿಸದ ನದೀಂ ತಾಯಿಗೇ ಹೊಡೆಯಲಾರಂಭಿಸಿದ್ದ. ಕೊನೆಗೆ ನದೀಂ ಸುಸ್ತಾದಾಗ ಆತನನ್ನು ಉಕ್ಕಿನ ಏಣಿಯೊಂದರತ್ತ ದೂಡಿ ದುಪಟ್ಟಾ ಉಪಯೋಗಿಸಿ ಕುತ್ತಿಗೆಗೆ ಬಿಗಿದು ಆತನನ್ನು ಸಾಯಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಇಡೀ ರಾತ್ರಿ ಹೆಣದ ಬಳಿ ಕುಳಿತು ಆಕೆ ಅತ್ತಿದ್ದಳು. ಬೆಳಗ್ಗೆ ನದೀಂ ಪತ್ನಿ ಮನೆಗೆ ಹಿಂದಿರುಗಿದಾಗಲಷ್ಟೇ ಘಟನೆ ಬೆಳಕಿಗೆ ಬಂದಿತ್ತು. ಅನ್ವರಿಯನ್ನು ನಂತರ ಪೊಲೀಸರು ಬಂಧಿಸಿದ್ದಾರೆ.

error: Content is protected !!
Scroll to Top