ಕಡ್ಯಕೊಣಾಜೆ ➤ ಒಕ್ಕೂಟ ಸದಸ್ಯರಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,ಸಪ್ಟೆಂಬರ್.21.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡ್ಯ-ಕೊಣಾಜೆ ಒಕ್ಕೂಟದ ವತಿಯಿಂದ ಶುಕ್ರವಾರ ಕೊಣಾಜೆ ಶಾಲೆಯಲ್ಲಿ ಶ್ರಮದಾನ ನಡೆಸಲಾಯಿತು.


ಕಡ್ಯ-ಕೊಣಾಜೆ ಉ.ಹಿ.ಪ್ರಾ. ಶಾಲೆಯಲ್ಲಿ ನಡೆದ ಶ್ರಮದಾನದಲ್ಲಿ ಶಾಲಾ ವಠಾರ ಸ್ವಚ್ಚತೆ, ಕೃಷಿ ಕೆಲಸ, ತೆಂಗಿನ ಗಿಡಕ್ಕೆ ಸೊಪ್ಪು ಹಾಕುವುದು, ಕಳೆ ತೆಗೆಯುವುದು ಸೇರಿದಂತೆ ಅನೇಕ ಕೆಲಸಗಳನ್ನು ಸದಸ್ಯರು ನಿರ್ವಹಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕರಾದ ಧರ್ಣಪ್ಪ ಗೌಡ, ತರಭೇತಿಯಲ್ಲಿರುವ ಮೇಲ್ವಿಚಾರಕರಾದ ಸುಬ್ರಹ್ಮಣ್ಯ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ಪ ಗೌಡ, ಮುಖ್ಯ ಶಿಕ್ಷಕ ರಾಮಕೃಷ್ಣ ಕೆ., ಕಡ್ಯಕೊಣಾಜೆ ಒಕ್ಕೂಟದ ಅಧ್ಯಕ್ಷರಾದ ಪುಂಡರೀಕಾಕ್ಷ, ಸೇವಾಪ್ರತಿನಿಧಿ ರೂಪ ಕೆ. ಉಪಸ್ಥಿತರಿದ್ದರು. ಶ್ರಮದಾನದಲ್ಲಿ ಸುಮಾರು 60ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.

Also Read  ಭಾರತ ಒಲಿಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿ.ಟಿ ಉಷಾ ಆಯ್ಕೆ

error: Content is protected !!
Scroll to Top