ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ಎಂ.ಪಿ.ಎಲ್.ಎಂ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಉಪನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.21.ಶಕ್ತಿನಗರದ ಶಕ್ತಿ ಪದವಿ ಪೂರ್ವಕಾಲೇಜಿನಲ್ಲಿ ದಿನಾಂಕ 18.09.2019ರಂದು ಎಂ.ಪಿ.ಎಲ್.ಎಂ ಸಂಸ್ಥೆಯು CLAT ಹಾಗೂ LAW-ENTRANCE  ಕುರಿತು ವಿದ್ಯಾರ್ಥಿಗಳಿಗಾಗಿ ಉಪನ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಪನಿಯಾಲ ಲಾ ಅಸೋಸಿಯೇಟ್ಸ್‍ನ ಶ್ರೀ ಕೃಷ್ಣ ಪ್ರಸಾದ್ ನಾದ್‍ಸರ್ ಮಾತನಾಡಿ ವಿದ್ಯಾರ್ಥಿಗಳು ಜೀವನವನ್ನುಉತ್ತಮವಾಗಿ ರೂಪಿಸಿಕೊಳ್ಳುವುದರ ಜೊತೆಗೆ, ಸಮಾಜ, ದೇಶ ಹಾಗೂ ಕಾನೂನು ಸುವ್ಯವಸ್ಥೆಯನ್ನು ಸಬಲಿಕರಣಗೊಳಿಸಲು ಬದ್ಧರಾಗಿರಬೇಕು. ಆದ್ದರಿಂದ ಕಾನೂನಿನ ಜ್ಞಾನಅತ್ಯವಶ್ಯಕ. ಸಮಾಜ ಮತ್ತುದೇಶದ ಸಬಲೀಕರಣಕ್ಕೆ ನೆರವಾಗುವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಅಂಜನಾ ಪ್ರಭುಅವರು ಮಾತನಾಡಿ, ಜಗತ್ತು ಅವಕಾಶಗಳ ಸಮುದ್ರವಾಗಿದೆ. ವಿದ್ಯಾರ್ಥಿಗಳು ನಿಪುಣರಾಗಿ ವ್ಯವಹರಿಸುವ ಮತ್ತು ಬದುಕುವಕಲೆಯನ್ನುಕಲಿಯಬೇಕು. ಕಾನೂನು ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿದ್ದು ಈ ಅವಕಾಶಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆದಾರಿದೀಪವಾಗುತ್ತದೆ. ವೃತ್ತಿಯನ್ನು ಬುದ್ಧಿವಂತಿಕೆಯಿಂದಆಯ್ಕೆ ಮಾಡಿಕೊಳ್ಳಬೇಕು ಎಂದರು.ಕಾಲೇಜಿನ ಆಡಳಿತ ಮಂಡಳಿ, ಬೋಧಕ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಶ್ರೀ ಪ್ರಭಾಕರಜಿ.ಎಸ್ ವಂದಿಸಿದರು. ಅಧ್ಯಾಪಕಿ ಶಿಲ್ಪ ಕಾರ್ಯಕ್ರಮ ನಿರೂಪಿಸಿದರು.

Also Read  ಕೋಟ :ಹೋಮ್ ಕ್ವಾರೆಂಟೈನ್‌ನಿಂದ ಬೇಸರಗೊಂಡು SSLC ವಿದ್ಯಾರ್ಥಿ ಆತ್ಮಹತ್ಯೆ

error: Content is protected !!
Scroll to Top