(ನ್ಯೂಸ್ ಕಡಬ) newskadaba.com ನೆಲ್ಯಾಡಿ ,ಸಪ್ಟೆಂಬರ್.21.ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು, ಸಾಪಿಯನ್ಶಿಯಾ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಥನಿ ಐಟಿಐ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಧ್ಯಕ್ಷೀಯಭಾಷಣ ಮಾಡಿದ ಸೈಂಟ್ ಅಲ್ಫೋನ್ಸಾ ಚರ್ಚಿನ ಸಹ ವಿಕಾರ್ ರೆ|ಫಾ| ಸೋಜನ್‍ರವರು ಮಾತನಾಡಿ ಜಾತಿ ಮತ ಧರ್ಮ ಭೇಧಿವಿಲ್ಲದೆ ಎಲ್ಲರೂ ಆಚರಿಸುವ ಹಬ್ಬವೇ ಓಣಂ. ನಾವೆಲ್ಲರೂ ಶಾಂತಿ, ಸಮಾಧಾನದಿಂದ ಒಂದೇ ಭಾವನೆಯಿಂದ ಸೌಹಾರ್ದದಿಂದ ನಮ್ಮ ಭಾರತ ದೇಶವನ್ನು ಕಟ್ಟೋಣ ಎಂದು ಶುಭ ಕೋರಿದರು.ಸಾಪಿಯನ್ಶಿಯಾ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿ ಇದರ ಪ್ರಾಂಶುಪಾಲರು ಹಾಗೂ ಸಂಚಾಲಕರಾದ ರೆ|ಡಾ|ಫಾ| ವರ್ಗೀಸ್ ಕೈಪನಡುಕ್ಕ ಮಾತನಾಡಿ ಎಲ್ಲರೂ ಸಂತೋಷದಿಂದ ನಾವೆಲ್ಲರೂ ಒಂದೇ ಅನ್ನುವ ಮನೋಭಾವದಿಂದ ಈ ಹಬ್ಬವನ್ನು ಆಚರಿಸೋಣ ಎಂದು ಎಲ್ಲರಿಗೂ ಶುಭ ಹಾರೈಸಿದರು.
ವೇದಿಕೆಯಲ್ಲಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ., ಉಪಪ್ರಾಂಶುಪಾಲರಾದ ಸುಶಿಲ್ ಕುಮಾರ್, ಸಂಸ್ಥೆಯ ಬರ್ಸಾರ್ ರೆ|ಫಾ| ಐಸಕ್ ಸ್ಯಾಂ, ಎಸ್.ಬಿ.ಕಾಲೇಜು ಉಪಪ್ರಾಂಶುಪಾಲೆ ಗೀತಾ, ಬೇಥನಿ ಐಟಿಐ ಪ್ರಾಂಶುಪಾಲರಾದ ಸಜಿಕೆ ತೋಮಸ್ ಹಾಗೂ ಮಾವೇಲಿ ವೇಷಧಾರಿ ಪ್ರಥಮ ಪಿಯು ವಿಭಾಗದ ನವೀನ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಎಸ್.ಬಿ.ಕಾಲೇಜು ಉಪನ್ಯಾಸಕರಾದ ಲಿಜೋಯ್ ಸ್ವಾಗತಿಸಿ, ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ಮುಖ್ಯಗುರುಗಳಾದ ಜೋರ್ಜ್ ಕೆ ತೋಮಸ್ ವಂದಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿನಿ ಜಿನ್ಸಿ ತೋಮಸ್ ಕಾರ್ಯಕ್ರಮ ನಿರೂಪಿಸಿದರು.ತದನಂತರ ಹುಲಿವೇಷ, ಓಣಂ ಹಾಡು, ಮತ್ತು ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.