ಮಾರ್ ಇವಾನಿಯೋಸ್ ಕಾಲೇಜು,ಕುಂತೂರು ➤ ವಿಶ್ವ ಶಾಂತಿ ದಿನ

(ನ್ಯೂಸ್ ಕಡಬ) newskadaba.com ಕುಂತೂರು,ಸಪ್ಟೆಂಬರ್.21.ಇಲ್ಲಿನ ಮಾರ್ ಇವಾನಿಯೋಸ್ ಕಾಲೇಜಿನ ಮಾನವಿಕ ಸಂಘದ ವತಿಯಿಂದ ವಿದ್ಯಾರ್ಥಿಗಳಲ್ಲಿ ಶಾಂತಿಯ ಮಹತ್ವದ ಕುರಿತು ಅರಿವು ಮೂಡಿಸಲು ವಿಶ್ವ ಶಾಂತಿ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಶಿಕ್ಷಣಾರ್ಥಿಯಾದ ಸಿಸ್ಟರ್ ಗ್ರೇಸಿ ಕೆ. ಜೆ ಯವರು ವಿಶ್ವ ಶಾಂತಿ ದಿನದ ಮಹತ್ವವನ್ನು ತಿಳಿಸಿದರು.


ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್, ಮಾನವಿಕ ಸಂಘದ ನಿರ್ದೆಶಕರು ಹಾಗೂ ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ರಾಜಿ ಸಿ.ಜೆ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಪದವಿ ವಿದ್ಯಾರ್ಥಿಗಳಾದ ಕುಮಾರಿ ನುಸೈಬಾ ಬಾನು ಸ್ವಾಗತಿಸಿ, ಕುಮಾರಿ ರಿಶಾನ ವಂದಿಸಿದರು.

Also Read  ಬಲ್ಯ: ಬೈಕಿಗೆ ಲಾರಿ ಢಿಕ್ಕಿ ► ಬೈಕ್ ಸವಾರನಿಗೆ ಗಾಯ

error: Content is protected !!
Scroll to Top