ದ. ಕ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಇವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ದ.ಕ ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.21.ದಕ್ಷಿಣ ಕನ್ನಡ ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ) ಮಂಗಳೂರು ಇವರ ವತಿಯಿಂದ ಸಪ್ಟೆಂಬರ್ 19 ರಂದು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಇವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೇಟಿ ಮಾಡಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ಸಂಘದ ಅಧ್ಯಕ್ಷೆ ಶೋಭಾ ಶೆಟ್ಟಿ, ಗೌರವ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ, ಪ್ರಧಾನ ಕಾರ್ಯದರ್ಶಿ ಕೆ ಮೋಹನ್, ಕೋಶಾಧಿಕಾರಿ ಯು.ಕೆ ನಾರಾಯಣ್, ಉಪಾಧ್ಯಕ್ಷರುಗಳಾದ ಪಿ.ಕೆ ಸುಧಾಕರ ಮತ್ತು ಶ್ರೀಧರ್, ಕ್ರೀಡಾಕಾರ್ಯದರ್ಶಿ ಎಸ್ ನಾಗೇಶ್, ಸಹಕಾರ್ಯದರ್ಶಿ ಅಶೋಕ್ ವೈ.ಜಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೇಶವ ಮೊೈಲಿ, ಶ್ರೀನಾಥ್ ಶೇಟ್, ನವೀನ್ ಕುಮಾರ್ ಜೋಗಿ, ತಾರಾ, ಸುಶೀಲಾ, ನಿವೃತ್ತಿ ಸಮಿತಿ ಸಂಚಾಲಕ ಚಂದ್ರಹಾಸ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿ’ಸೋಜ, ಸಂಘದ ಮಾಜಿ ಸದಸ್ಯ ಜಿಲ್ಲಾಧಿಕಾರಿಯವರ ವಾಹನ ಚಾಲಕರಾದ ಭಾಸ್ಕರ ದೇವಾಡಿಗ ಇವರೆಲ್ಲರೂ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಂಘದ ವತಿಯಿಂದ ಮನೆ ನಿವೇಶನ ಬಗ್ಗೆ ಮನವಿಯನ್ನು ಮತ್ತು ‘ಡಿ’ ಗ್ರೂಪ್ ನೌಕರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರಿಗೆ ವಿನಂತಿ ಮಾಡಲಾಯಿತು.

Also Read  ಎಸ್ಡಿಪಿಐ ಆತೂರು ವಲಯ ಸಮಿತಿ ಪುನರ್ರಚನೆ ಹಾಗೂ ಚುನಾವಣಾ ಪೂರ್ವಭಾವಿ ಸಭೆ

error: Content is protected !!
Scroll to Top