(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.21.ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಅವರ ಪ್ರದೇಶಾಭಿವೃದ್ದಿ ನಿಧಿಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ.
2019-20ನೇ ಸಾಲಿನ ಅನುದಾನದಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ಎದುರುಗಡೆ ಇಂಟರ್‍ಲಾಕ್ ಅಳವಡಿಕೆ ಕಾಮಗಾರಿ ರೂ. 5 ಲಕ್ಷ, ಪಡುಬಿದ್ರಿ ಬಂಟರ ಸಮುದಾಯ ಭವನದ ಅಭಿವೃದ್ದಿಗಾಗಿ ರೂ. 5 ಲಕ್ಷ, ಮಂಗಳೂರು ತಾ| ಕುಪ್ಪೆಪದವು ಶಾಲೆಗೆ ಹೈಮಾಸ್ಕ್ ದೀಪದ ಅಳವಡಿಕೆ ಕಾಮಗಾರಿ ರೂ.1.00ಲಕ್ಷ, ಫರಂಗೀಪೇಟೆ ಸೇವಾಂಜಲಿ ಟ್ರಸ್ಟ್ ಬಳಿ ಹೈಮಾಸ್ಕ್ ದೀಪದ ಅಳವಡಿಕೆ ರೂ. 1 ಲಕ್ಷ, ಉಡುಪಿ ಜಿಲ್ಲೆ ಮುದರಂಗಡಿ ಸಂತ ಪ್ರಾನ್ಸಿಸ್ ಅನುದಾನಿತ ಶಾಲೆಗೆ ಕೊಳವೆ ಬಾವಿ ಹಾಗೂ ಪಂಪ್‍ಸೆಟ್ ಅಳವಡಿಕೆ ಕಾಮಗಾರಿ ರೂ. 2.60 ಲಕ್ಷ, ಉಡುಪಿ ಜಿಲ್ಲೆ ಮುದರಂಗಡಿ ಸಾಂತೂರು ಆರೋಗ್ಯ ಕೇಂದ್ರದಲ್ಲಿ ಶವಗಾರ ಕಟ್ಟಡ ರಚನೆಗೆ ರೂ. 5 ಲಕ್ಷ.
ಬೆಳ್ತಂಗಡಿ ಮಹಿಳಾ ಮಂಡಳ ಒಕ್ಕೂಟ ಕಟ್ಟಡ ರಚನೆ ಕಾಮಗಾರಿಗೆ ರೂ. 1.50 ಲಕ್ಷ ಪುತ್ತೂರು ಪಾಣಾಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಂಗಮಂದಿರಕ್ಕೆ ರೂ. 2..50 ಲಕ್ಷ, ಮಂಗಳೂರು ಮಹಿಳಾ ಮಂಡಳಲಗಳ ಒಕ್ಕೂಟ ಇವರಿಗೆ 2 ಲಕ್ಷ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಭವನ ಕಟ್ಟಡ ರಚನೆಗೆ ರೂ. 2 ಲಕ್ಷ, ತುಳು ಸಾಹಿತ್ಯ ಅಕಾಡೆಮಿ ಅವರಣಗೋಡೆಗೆ ರೂ. 3 ಲಕ್ಷ, ಮೂಡಬಿದ್ರೆ ತಾ| ಸ್ವರಾಜ್ಯ ಮೈದಾನದ ಸ್ಕೌಟ್ಸ್ & ಗೈಡ್ಸ್ ಕನ್ನಡ ಭವನದ ಕಟ್ಟಡಕ್ಕೆ 2.50 ಲಕ್ಷ ಮಂಗಳೂರು ಬೈಕಂಪಾಡಿ ಎಪಿಎಂಸಿ ಎದುರುಗಡೆ ರಿಕ್ಷಾ ಮೇಲ್ಛಾವಣೆ ಕಾಮಗಾರಿ ರೂ. 1.50 ಲಕ್ಷ, ಮಂಗಳೂರು ಮನಪಾ ವ್ಯಾಪ್ತಿಯ ವಾರ್ಡ್ ನಂ. 35ನೇ ಪದವು ರಾಜೀವ ನಗರದಲ್ಲಿ ನಾಗಬ್ರಹ್ಮ ದೇವಸ್ಥಾನ ರಸ್ತೆ ಅಭಿವೃದ್ದಿ ಕಾಮಗಾರಿ ರೂ. 3 ಲಕ್ಷ, ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲಾರುಖಾನದ ಪ್ರಿನ್ಸ್ ಪಾಯಿಂಟ್ ಬಳಿ ರಿಕ್ಷಾ ನಿಲ್ದಾಣ ರಚನೆ ಕಾಮಗಾರಿಗೆ ರೂ. 2 ಲಕ್ಷ, ಮುದುರಂಗಡಿ ಪೇಟೆಯಲ್ಲಿ ರಿಕ್ಷಾ ತಂಗುದಾಣ ರಚನೆ ಕಾಮಗಾರಿಗೆ ರೂ. 3 ಲಕ್ಷ, ಅನುದಾನ ಬಿಡುಗಡೆಗೊಳಿಸಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.