ಕೊಂಬಾರಿನ ಲೋಕೇಶ್ ಎಂಬವರಿಗೆ ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ ➤ ಅಮಾಯಕನಿಗೆ ಹಲ್ಲೆ- ಸೆ.21ರಂದು ಕೆಂಜಾಳದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ ,ಸಪ್ಟೆಂಬರ್.21.ಅರಣ್ಯಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕೊಂಬಾರು ನಿವಾಸಿ ಲೋಕೇಶ್ ಕಾಪಾರು ಅವರು ಸೆ.19ರಂದು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಸುಬ್ರಹ್ಮಣ್ಯ ಅರಣ್ಯ ವಿಭಾಗದ ಭಾಗಿಮಲೆ ಮೀಸಲು ಅರಣ್ಯದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ನಿರಪರಾಧಿಯಾದ ತನ್ನ ಮೆಲೆ ಅರಣ್ಯಾಧಿಕಾರಿಗಳು ಹಲ್ಲೆ ನಡೆಸಿದ್ದಾಗಿ ಅವರು ಆರೋಪಿಸಿದ್ದಾರೆ, ಕೆಲವು ದಿನಗಳ ಹಿಂದೆ ಭಾಗಿಮಲೆ ಮೀಸಲು ಅರಣ್ಯದಲ್ಲಿ ಮರ ಕಳವು ನಡೆದಿತ್ತು, ಈ ಮರಗಳನ್ನು ಲೋಕೇಶ್ ಅವರು ಕಳವು ನಡೆಸಿದ್ದಾರೆಂದು ಆರೋಪಿಸಿ ಲೋಕೇಶ್ ಅವರನ್ನು ಅರಣ್ಯಧಿಕಾರಿಗಳು ಬಂಧಿಸಿ, ಅವರಿಗೆ 25ಸಾವಿರ ದಂಡ ವಿಧಿಸಿದ್ದರು. ಈ ಸಂದರ್ಭದಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಆರೋಪ ನಿರಾಕರಿಸಿದ ಅರಣ್ಯ ಇಲಾಖೆ
ಮರ ಕದ್ದ ಬಗೆಗಿನ ಸಾಕ್ಷಿ ಆಧಾರಿಸಿ ಲೋಕೇಶ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದೆವೆ, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿ ಜಾಮೀನು ಪಡೆದು ಬಿಟ್ಟಿದ್ದೆವೆ, ಯಾವುದೇ ಹಲ್ಲೆ ನಡೆಸಿಲ್ಲ, ಕಾನೂನು ಪ್ರಕಾರವೇ ತನಿಖೆ ನಡೆಸಿದ್ದೆವೆ ಎಂದು ಸುಬ್ರಹ್ಮಣ್ಯದ ಆರ್.ಎಫ್.ಒ ತ್ಯಾಗರಾಜ್ ತಿಳಿಸಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ...?

ಇಂದು ಕೆಂಜಾಳದಲ್ಲಿ ನಾಗರಿಕರಿಂದ ಪ್ರತಿಭಟನೆ
ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ್ ಎಂಬವರು ನಿರಾಪರಾಧಿಯಾಗಿದ್ದು ಅವರ ಮೇಲೆ ವಿನಾಃ ಕಾರಣ ಹಲ್ಲೆ ನಡೆಸಲಾಗಿದೆ, ಭಾಗಿಮಲೆ ಮೀಸಲು ಅರಣ್ಯದಲ್ಲಿ ಬೃಹತ್ ಗಾತ್ರದ ಮರ ಕಳವು ನಡೆದಿದ್ದು ಇದರ ಹಿಂದೆ ದೊಡ್ಡ ಜಾಲವಿದೆ, ಆದರೆ ಪ್ರಕರಣವನ್ನು ಮುಚ್ಚಿ ಹಾಕಲು ಅರಣ್ಯಾಧಿಕಾರಿಗಳು ಅಮಾಯಕನ ಮೇಲೆ ಕೇಸು ಹಾಕಿ ದಂಡ ಹಾಕಿದ್ದಾರೆ, ಇದನ್ನು ಖಂಡಿಸಿರುವ ಅಲ್ಲಿಯ ನಾಗರಿಕರು ನ್ಯಾಯಕ್ಕಾಗಿ ಆಗ್ರಹಿಸಿ ಕೆಂಜಾಳ ಸಹಾಯಕ ವಲಯಾರಣ್ಯಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಲೋಕೇಶ್ ಅವರಿಗೆ ಹಲ್ಲೆ ನಡೆಸಿದ ಅರಣ್ಯ ರಕ್ಷಕ ಅಶೋಕ್ ಹಾಗೂ ಅವರಿಗೆ ಸಹಕರಿಸಿದ ಅವರನ್ನು ಅಮಾನತು ಮಾಡುವಂತೆ ಪ್ರತಿಭಟನಾಕಾರು ಆಗ್ರಹಿಸಿದ್ದಾರೆ.

Also Read  ಮಂಗಳೂರು: ವಿಷ ಆಹಾರ ಸೇವನೆ..!      ➤  ನೂರಾರು ಮಕ್ಕಳು ಅಸ್ವಸ್ತ

error: Content is protected !!