ಚಾಲಕನ ತೀರಾ ನಿರ್ಲಕ್ಷತನದಿಂದ ಹತೋಟಿ ತಪ್ಪಿ ಚರಂಡಿ ತಡೆ ಗೋಡೆಗೆ ಡಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸಪ್ಟೆಂಬರ್.20.ದಿನಾಂಕ 19-09-2019ರಂದು ಪಿರ್ಯಾದಿ ರವರು ಮತ್ತು ನಾಗರಾಜ್ ರಾವ್ ಕೆ ಎನ್ (61) ಎಂಬವರು ಸೇರಿಕೊಂಡು ಪುತ್ತೂರು ವಿವೇಕಾನಂದ ಕಾಲೇಜಿನ ಲ್ಯಾಬ್ ಸರ್ವಿಸ್ ಗಾಗಿ ನಾಗರಾಜ್ ರಾವ್ ಕೆ ಎನ್ ರವರ ಬಾಬ್ತು ಕಾರು ನಂಬ್ರ ಕೆಎ-03-ಎಂವಿ-3008ನೇದರಲ್ಲಿ ರಾ ಹೆ 75ರಲ್ಲಿ ಬರುತ್ತದ್ದ ವೇಳೆ ಈ ಅಪಘಾತ ನಡೆದಿದೆ.

ಮದ್ಯಾಹ್ನ ಸುಮಾರು 12.30 ಗಂಟೆ ಸಮಯಕ್ಕೆ, ಕಡಬ ತಾಲೂಕು, ಶಿರಾಡಿ ಗ್ರಾಮದ ಗಡಿ ದೇವಸ್ಥಾನದಿಂದ ಸುಮಾರು 100 ಮೀಟರ್ ಮುಂದೆ ಗುಂಡ್ಯ ಕಡೆಗೆ ತಲಪುತ್ತಿದ್ದಂತೆ ತಿರುವು ಕಾಂಕ್ರೀಟ್ ರಸ್ತೆಯಲ್ಲಿ ಕಾರಿನ ಚಾಲಕನು ಕಾರನ್ನು ತೀರಾ ನಿರ್ಲಕ್ಷತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿದ ಪರಿಣಾಮ ಕಾರು ಹತೋಟಿ ತಪ್ಪಿ ರಸ್ತೆಯ ಚರಂಡಿ ತಡೆ ಗೋಡೆಗೆ ಡಿಕ್ಕಿ ಹೊಡೆಯಿತು. ಕಾರು ಎದುರು ಸಂಪೂರ್ಣ ಜಖಂಗೊಂಡು ಕಾರಿನ ಎದುರು ಎಡ ಬದಿ ಕುಳಿತಿದ್ದ ಪಿರ್ಯಾದಿ ಹಣೆಗೆ, ಮುಖಕ್ಕೆ ರಕ್ತಗಾಯ, ದೇಹದ ಇತರೇ ಭಾಗಗಳಿಗೆ ಗಾಯಗಳಾಗಿವೆ.

Also Read  ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು

ಕಾರಿನ ಚಾಲಕ ನಾಗರಾಜ್ ರಾವ್ ಕೆ ಎನ್ ರವರಿಗೆ ಸ್ಟೇರಿಂಗ್ ಬಲವಾಗಿ ಎದೆಯ ಭಾಗಕ್ಕೆ ಗುದ್ದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಪಿರ್ಯಾಧಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಠಾಣಾ ಅ.ಕ್ರ 131/2019 ಕಲಂ:279,337,304(ಎ)ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಪಿರ್ಯಾಧಿದಾರರಾದ ಹನುಮಂತ ನಾಯ್ಕ ಪ್ರಾಯ 26 ವರ್ಷ, ತಂದೆ: ದೇವರಾಜ ನಾಯ್ಕ  ರಾತಿಭಾವಂತ, ರಾಯದುರ್ಗ ತಾಲೂಕು, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ಎಂಬವರ ಹೇಳಿಕೆಯಂತೆ ದೂರುದಾಖಲಿಸಲಾಗಿದೆ.

Also Read  ಬೆಳಂದೂರು: ಜಯಪ್ರಕಾಶ್ ಅಲೆಕ್ಕಾಡಿಯವರಿಗೆ ಬೀಳ್ಕೊಡುಗೆ

Gems

error: Content is protected !!
Scroll to Top