ಡಿಜಿಟಲ್ ಮಾದರಿಯ ಜಾಹೀರಾತು ಫಲಕ ಅಳವಡಿಕೆ ➤ಸಾರ್ವಜನಿಕರಲ್ಲಿ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.18. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಅನಧಿಕೃತವಾಗಿ ಕಟೌಟ್, ಪ್ಲೆಕ್ಸ್ ಬ್ಯಾನರು ಮತ್ತು ಬಂಟಿಂಗ್ಸ್ ಗಳನ್ನು ಅಳವಡಿಸುತ್ತಿರುವುದು ಕಂಡುಬಂದಿದೆ. ಅನಧಿಕೃತವಾಗಿ ಕಟೌಟ್, ಪ್ಲೆಕ್ಸ್‍ಬ್ಯಾನರ್, ಬಂಟಿಂಗ್ಸ್‍ಗಳನ್ನು ಅಳವಡಿಸದಂತೆ ಹಲವಾರು ಬಾರಿ ಪ್ರಕಟಣೆ ನೀಡಿದ್ದರೂ ನಾಗರಿಕರು ಈ ಬಗ್ಗೆ ಸ್ಪಂದಿಸದೇ ನಗರದ ಸ್ವಚ್ಚತೆ ಮತ್ತು ಸೌಂದರ್ಯಕ್ಕೆ ಅಡ್ಡಿಯಾಗುತ್ತಿರುವುದು ಕಂಡುಬರುತ್ತದೆ.

ಮಂಗಳೂರು ನಗರವನ್ನು ಬ್ಯಾನರು ಮುಕ್ತ ನಗರವನ್ನಾಗಿ ಪರಿವರ್ತಿಸುವ ಹಿನ್ನೆಲೆಯಲ್ಲಿ ಮುಂಬರುವ ದಸರಾ ಮತ್ತು ಇನ್ನಿತರ ಹಬ್ಬ ಹರಿದಿನಗಳಲ್ಲಿ ಯಾವುದೇ ಅನಧಿಕೃತ ಫಲಕ, ಪ್ಲೆಕ್ಸ್, ಬ್ಯಾನರು, ಕಟೌಟ್, ಬಂಟಿಂಗ್ಸ್‍ಗಳನ್ನು ಅಳವಡಿಸದೇ ನಗರದ ಸೌಂದರ್ಯ ಮತ್ತು ಸ್ವಚ್ಚತೆ ಹಿತದೃಷ್ಟಿಯಿಂದ ಡಿಜಿಟಲ್ ಮಾದರಿಯ ಜಾಹೀರಾತು ಫಲಕಗಳನ್ನು ಅಳವಡಿಸಲು ನಿಯಾಮನುಸಾರ ಪರಿಶೀಲಿಸಿ ನಿಗದಿತ ಶುಲ್ಕವನ್ನು ಪಾವತಿಸಿದ್ದಲ್ಲಿ ತಾತ್ಕಾಲಿಕವಾಗಿ ಅನುಮತಿಯನ್ನು ನೀಡಲಾಗುವುದು.

Also Read  ವಿಟ್ಲ: ಸೊಸೈಟಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ► ಕಳ್ಳತನಕ್ಕೆ ವಿಫಲ ಯತ್ನ

ಆದುದರಿಂದ ಸಾರ್ವಜನಿಕರು ದಸರಾ ಹಬ್ಬದ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿಕೊಂಡು ಡಿಜಿಟಲ್ ಮಾದರಿಯ ಜಾಹೀರಾತು ಫಲಕಗಳನ್ನು ಅಳವಡಿಸಬೇಕು. ಇದಕ್ಕೆ ತಪ್ಪಿದಲ್ಲಿ ಪಾಲಿಕೆಯು ಮುಂದಿನ ದಿನಗಳಲ್ಲಿ ನಿರಂತರ ಕಾರ್ಯಚರಣೆ ನಡೆಸಿ ಈ ಎಲ್ಲಾ ಅನಧಿಕೃತಗಳನ್ನು ತೆರವುಗೊಳಿಸುವದರೊಂದಿಗೆ ನಿಯಮಾನುಸಾರ ದಂಡ ವಿಧಿಸಿ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅಲ್ಲದೇ, ಅನಧಿಕೃತವಾಗಿ ಅಳವಡಿಸಿದ ಫಲಕಗಳಿಂದ ಸಾರ್ವಜನಿಕರಿಗೆ/ ಸ್ಥಿರಾಸ್ತಿಗಳಿಗೆ ಅಡಚಣೆ ಉಂಟಾದಲ್ಲಿ ಸಂಬಂಧಪಟ್ಟವರೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು. ನಾಗರೀಕರು ಈ ಬಗ್ಗೆ ಪಾಲಿಕೆಯೊಂದಿಗೆ ಸಹಕರಿಸುವಂತೆ ಮಹಾನಗರಪಾಲಿಕೆ ಆಯುಕ್ತರ ಪ್ರಕಟನೆ ತಿಳಿಸಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ►ಜಲಕೃಷಿಯಲ್ಲಿ ಉದ್ಯಮ ಶೀಲತೆಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿಯ ಅಧ್ಯಯನ

Gems

error: Content is protected !!
Scroll to Top