(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.18. ಬಂಟ್ವಾಳ ತಾಲೂಕಿನ ವಿಟ್ಲ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಒಬ್ಬರಂತೆ ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು ನೇಮಕ ಮಾಡಲು ಅವಕಾಶವಿದೆ. ಅವರಿಗೆ ಮಾಸಿಕ ರೂ.3000/- ಗೌರವಧನವನ್ನು ನೀಡಲಾಗುತ್ತದೆ. ಅಳಿಕೆ, ಮಂಚಿ, ಇರಾ, ಕೆದಿಲ, ಕಡೇಶಿವಾಲಯ, ಬರಿಮಾರು, ಇಡ್ಕಿದು, ಅನಂತಾಡಿ, ಪೆರ್ನೆ, ವಿಟ್ಲಮುಡ್ನೂರು, ಬೋಳಂತೂರು, ಕೊಳ್ನಾಡು, ಸಾಲೆತ್ತೂರು, ಕರೋಪಾಡಿ, ಪೆರುವಾಯಿ ಗ್ರಾಮ ಪಂಚಾಯತ್‍ಗಳಲ್ಲಿ ಹುದ್ದೆ ಖಾಲಿಯಿದೆ.
ಆಸಕ್ತ ವಿಕಲಚೇತನರು ಅಕ್ಟೋಬರ್ 14ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ರಿಹಾ ಪ್ಲಾನೆಟ್, ಚಂದ್ರನಾಥ ಬಸದಿ ಎದುರು, ಪುತ್ತೂರು ರಸ್ತೆ, ವಿಟ್ಲ ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಟ್ಲ ಇವರ ಪ್ರಕಟಣೆ ತಿಳಿಸಿದೆ.