➤ ➤ ವನ್ಯಜೀವಿ ಸಪ್ತಾಹ 2019 ಅಂಗವಾಗಿ ವಿವಿಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17. ಅಕ್ಟೋಬರ್ 6 ರಂದು ಪಿಲಿಕುಳದಲ್ಲಿ ಪ್ರಕೃತಿ ಮತ್ತು ವನ್ಯಜೀವಿ ವಿಷಯದ ಮೇಲೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ರಾಜ್ಯಮಟ್ಟ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ :- ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲಿದೆ. ಭಾರತ ದೇಶದ ಪ್ರಾಣಿ, ಪಕ್ಷಿ, ಉರಗಗಳ ಛಾಯಾಚಿತ್ರಗಳಾಗಿರಬೇಕು. ನಿಸರ್ಗದಲ್ಲಿ ಅಥವಾ ಜೈವಿಕ ಉದ್ಯಾನವನಗಳಲ್ಲಿ ತೆಗೆದ 8.12 ಅಳತೆಗಿಂತ ಕಡಿಮೆಯಾಗದೆ ಛಾಯಾಚಿತ್ರಗಳನ್ನು ಅಕ್ಟೋಬರ್ 4 ರೊಳಗೆ ಕಳುಹಿಸಬೇಕು. ಅಕ್ಟೋಬರ್ 6 ರಂದು ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು.

ಎಲ್ಲಾ ಛಾಯಾಚಿತ್ರಕಾರರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ ಛಾಯಾಚಿತ್ರ ತೆಗೆದ ಸ್ಥಳ, ದಿನಾಂಕ, ಛಾಯಾಚಿತ್ರಕಾರರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಬೇಕು.ಅಕ್ಟೋಬರ್ 6 ರಂದು ಹಿರಿಯ, ಕಿರಿಯ, ಪ್ರಾಥಮಿಕ, ಪೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಬೇಕಾದ ಸಾಮಾಗ್ರಿಗಳನ್ನು ತರಬೇಕು, ಹಾಳೆಯನ್ನು ಸ್ಥಳದಲ್ಲೇ ನೀಡಲಾಗುವುದು.

Also Read  ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ - ಲಾರಿ ಸಹಿತ ಮರ ವಶಕ್ಕೆ


ಅಕ್ಟೋಬರ್ 7 ರಂದು ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಮೂಡುಶೆಡ್ಡೆ ಪಂಚಾಯತ್ ಬಳಿ ಸುತ್ತಮತ್ತಲಿನ ಪ್ರದೇಶಗಳ ಸಾಕು ನಾಯಿಗಳಿಗೆ ಹುಚ್ಚು ನಿರೋಧಕ ಲಸಿಕೆ ಮತ್ತು ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ನೊಂದಣಿ ಮಾಡಲು ದೂರವಾಣಿ ಸಂಖ್ಯೆ:-0824-2263300, 9980187057, ವೆಬ್‍ಸೈಟ್ www.pilikulazoo.com, ಇಅಂಚೆ- ECAZÉ-   pilikulazoo@gmail.com ಸಂಪರ್ಕಿಸಲು ನಿರ್ದೇಶಕರು ಹೆಚ್ ಜೆ ಭಂಡಾರಿ, ಪಿಲಿಕುಳ ಜೈವಿಕ ಉದ್ಯಾನವನ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ರಾಜ್ಯದ 10 ವಿಜ್ಞಾನಿಗಳಿಗೆ ಯಂಗ್‌ ಸೈಂಟಿಸ್ಟ್‌ ಪ್ರಶಸ್ತಿ

error: Content is protected !!
Scroll to Top