ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಚಾರಣೆಯ ಮಹತ್ವದ ಹಿನ್ನಲೆಯಲ್ಲಿ ➤ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.17. ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಂಗಳೂರು ಹಾಗೂ ವಿಜಯ ಫ್ರೆಂಡ್ಸ್, ಸೂಟರ್‍ಪೇಟೆ, ಇವರ ಸಹಯೋಗದಲ್ಲಿ “ಸ್ವಚ್ಛ ಪರಿಸರ-ಸ್ವಸ್ಥ ಪರಿಸರ” ಎಂಬ ಧ್ಯೇಯದಡಿಯಲ್ಲಿ ಸೂಟರ್‍ಪೇಟೆಯ ಮುಖ್ಯ ರಸ್ತೆ ಹಾಗೂ ಆಯ್ದ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಸೆಪ್ಟೆಂಬರ್ 15
ರಂದು ಹಮ್ಮಿಕೊಳ್ಳಲಾಯಿತು.

ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಧಿಕಾರಿ ರಘುವೀರ್ ಸೂಟರ್‍ಪೇಟೆ, ತಾಲೂಕು ಪದಾಧಿಕಾರಿಗಳಾದ ವಿಕಾಸ್ ಕುಂಪಲ, ಚಿಂತನ, ಪ್ರಜ್ವಲ್ ಉಳ್ಳಾಲ್ ಹಾಗೂ ಇಲಾಖೆಯ ಇತರ ಸಿಬ್ಬಂದಿಗಳ ಜೊತೆಗೆ ವಿಜಯ ಫ್ರೆಂಡ್ಸ್‍ನ ಗೌರವ ಅಧ್ಯಕ್ಷ ಮೋಹನ್ ಎಸ್, ಅಧ್ಯಕ್ಷ ಬಾಲಕೃಷ್ಣ ಜೋಗಿ ಹಾಗೂ ಸರ್ವಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸೂಟರ್‍ಪೇಟೆಯ ಮುಖ್ಯ ರಸ್ತೆಯಿಂದ ಆರಂಭಗೊಂಡ ಈ ಸ್ವಚ್ಚತಾ ಕಾರ್ಯಕ್ರಮವು ಊರಿನ ಜನರಲ್ಲಿ ರೋಗ ಮುಕ್ತ, ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಿಸುವ ಬಗ್ಗೆ ಅರಿವನ್ನು ಮೂಡಿಸಿತು. ಯುವಕ ಮಂಡಲದ ಸದಸ್ಯರ ಈ ಸಮಾಜಮುಖಿ ಸೇವೆಯು ಊರಿನ ಜನತೆಯ ಮೆಚ್ಚುಗೆಗೆ ಪ್ರಾತವಾಯಿತು.

error: Content is protected !!
Scroll to Top