(ನ್ಯೂಸ್ ಕಡಬ) newskadaba.com ಕುಂತೂರು,ಸಪ್ಟೆಂಬರ್.14.ಇಲ್ಲಿನ ಮಾರ್ ಇವಾನಿಯೋಸ್ ಪದವಿ ವಿಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳು ಕಾಲೇಜಿನ ಶಿಕ್ಷಕ ವರ್ಗಕ್ಕೆ ವೈವಿದ್ಯಮಯವಾದ ಮನೋರಂಜನಾ ಸ್ಪರ್ಧೆಗಳನ್ನೂ ಆಯೋಜಿಸಿದರು. ಕಾಲೇಜಿನ ಸಂಚಾಲಕ ವಂ/ರೆ/ಫಾ/ಡಾ/ ಎಲ್ದೋ ಪುತ್ತನ್ ಕಂಡತ್ತಿಲ್ ಅವರು ವಿದ್ಯಾರ್ಥಿಗಳನ್ನು ಧನಾತ್ಮಕವಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಾಗೂ ಶಿಕ್ಷಕರು ಎಂದಿಗೂ ಸಮಾಜದಲ್ಲಿ ಗೌರವ ಹುದ್ದೆಯಲ್ಲಿರುವವರು ಎಂದು ಉಲ್ಲೇಖಿಸಿದರು, ಹಾಗೂ ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರೀಮತಿ ಉಷಾ ಎಂ.ಎಲ್. ಶಿಕ್ಷಕ ದಿನಾಚರಣೆಯ ಮಹತ್ವ ಮತ್ತು ಒಬ್ಬ ಶಿಕ್ಷಕಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಪದವಿ ವಿದ್ಯಾರ್ಥಿನಿ ಕುಮಾರಿ ಜೆಸಿಂತಾ ಸ್ವಾಗತಿಸಿ, ಬಿ.ಎಡ್. ಪ್ರಶಿಕ್ಷಣಾರ್ಥಿ ಕುಮಾರಿ ರೋಶ್ನಿ ವಂದಿಸಿದರು. ಕುಮಾರಿ ಅನುಷಾ. ಜಿ. ಕಾರ್ಯಕ್ರಮ ನಿರೂಪಿಸಿದರು.