ಇನ್ಸ್‌ಪೆಕ್ಟರ್ ಆಗಿ ಭಡ್ತಿಗೊಂಡು ಮಂಗಳೂರಿಗೆ ವರ್ಗಾವಣೆಯಾದ ಕಡಬ ಎಸ್ಐ ➤ ಪ್ರಕಾಶ್ ದೇವಾಡಿಗರಿಗೆ ಸಂಘ ಸಂಸ್ಥೆಗಳಿಂದ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.14. ನೂಜಿಬಾಳ್ತಿಲದ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನಕ್ಕೆ ಕಡಬ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದು, ಭಡ್ತಿಗೊಂಡು, ಮಂಗಳೂರಿಗೆ ವರ್ಗಾವಣೆಗೊಂಡ ಪ್ರಕಾಶ್ ದೇವಾಡಿಗ ಅವರು ಶುಕ್ರವಾರ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Gems


ಈ ಸಂದರ್ಭದಲ್ಲಿ ಪ್ರಕಾಶ್ ದೇವಾಡಿಗರನ್ನು ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಅರ್ಚಕ ಕೃಷ್ಣ ಹೆಬ್ಬಾರ್, ನೂಜಿಬಾಳ್ತಿಲ ಬೀಟ್ ಪೊಲೀಸ್ ಚಿನ್ನಪ್ಪ ಕೆ., ಭರತ್, ಪೊಲೀಸ್ ಸಿಬ್ಬಂದಿಗಳು, ಆಡಳಿತ ಸಮಿತಿ ಸದಸ್ಯರಾದ ರವಿಪ್ರಸಾದ್ ಕರಿಂಬಿಲ, ದುಗ್ಗಣ್ಣ ಗೌಡ ಹೊಸಮನೆ, ಪರಮೇಶ್ವರ ಗೌಡ ಸಂಕೇಶ, ಸಾಮಾಜಿಕ ಕಾರ್ಯಕರ್ತ ಉಮೇಶ್ ಸಾಯಿರಾಂ, ಪ್ರಮುಖರಾದ ಯಶೋಧರ ಗೌಡ, ಸೋಮಶೇಖರ ನಡುಗುಡ್ಡೆ, ದಿನೇಶ್ ಬಾಂತಾಜೆ, ಪುರುಷೋತ್ತಮ ಮಾರಪ್ಪೆ, ಪದ್ಮನಾಭ ಕೇಪುಂಜ, ಮೋನಪ್ಪ ಗೌಡ ನಡುಗುಡ್ಡೆ, ಉಮೇಶ್ ಸಾಕೋಟೆಜಾಲು, ಮಂಜಪ್ಪ ಗೌಡ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.

Also Read  ಉಪ್ಪಿನಂಗಡಿ: ಏರ್‌ ಕಂಪ್ರೈಸರ್‌ ಸ್ಫೋಟಗೊಂಡು ಕಾರ್ಮಿಕ ಮೃತ್ಯು

ಕುಂತೂರು ಶಾಖೆ SKSSF ಹಾಗೂ ಜಮಾಅತರ ವತಿಯಿಂದ ಕುಂತೂರು ಹಿದಾಯತುಲ್ ಇಸ್ಲಾಮ್ ಮದರಸ ಸಭಾಂಗಣದಲ್ಲಿ ಸ್ಮರಣಿಕೆ ನೀಡಿ ಶಾಲು ಹೊದಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SKSSF ಅಧ್ಯಕ್ಷ ಮಹಮ್ಮದಾಲಿ ಕೋಚಕಟ್ಟೆ ವಹಿಸಿದ್ದರು. ಸ್ಥಳೀಯ ಖತೀಬ್ ಬಹು ಮಜೀದ್ ದಾರಿಮಿ ಸಭೆಯನ್ನು ಉದ್ಘಾಟಿಸಿದರು ಸಭೆಯಲ್ಲಿ ಹಸೈನಾರ್ ಹಾಜಿ ಚಾಲ್ಕೇರೆ  ಕೋಚಕಟ್ಟೆ ನೂರುಲ್ ಹುದಾ  ಮದರಸ ಅಧ್ಯಕ್ಷ ಇಸ್ಮಾಯಿಲ್ ಅಲ್ ಅಮೀನ್ ಕುಂತೂರು A&B ಜುಮಾಮಸೀದಿ  ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್ ಕೋಚಕಟ್ಟೆ ನೂರುಲ್ ಹುದಾ ಮದರಸ ಕಾರ್ಯದರ್ಶಿ ನಯಾಜ್ ZB, ಪುತ್ತುಮೋನು ಗಾಂಜಾಲ್, ಪುತ್ತುಮೋನು ಮುಡಿಪಿನಡ್ಕ, ರಜಾಕ್ ಹಾಜಿ ಮರುವಂತಿಲ ಹಾಗು ಊರಿನ ಮಹನೀಯರು ಹಾಗು SKSSF ಕಾರ್ಯಕರ್ತರು ಉಪಸ್ಥಿತರಿದ್ದರು. ಯಂ.ಕೆ.ಅಶ್ರಫ್ ಮೌಲವಿ ಕೋಲ್ಪೆ ಸ್ವಾಗತಿಸಿ, ವಂದಿಸಿದರು.

Also Read  ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ವತಿಯಿಂದ ಮೆರವಣಿಗೆ

error: Content is protected !!
Scroll to Top