(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.14.ಸ್ಪೋಟಕ ಕಾಯಿದೆ ಮತ್ತು ನಿಯಮದಡಿಯಲ್ಲಿ ಹಾಗೂ ಮೈದಾನದಲ್ಲಿ/ತೆರೆದ ಪ್ರದೇಶದಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರಾವಾಣಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದ್ದು, ಪೊಲೀಸ್ ಆಯುಕ್ತರ ವ್ಯಾಪ್ತಿಯನ್ನು ಹೊರತು ಪಡಿಸಿ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ(ನಾಲ್ಕು) ಬ್ಲೂ ಪ್ರಿಂಟ್ ಮತ್ತು (ಎರಡು) ಫೋಟೋ, (ನಾಲ್ಕು) ಪ್ರಸ್ತಾವಿಕ ಜಮೀನಿನ ಪಹಣಿ, (ನಾಲ್ಕು) ಸರ್ಕಾರಿ ಜಮೀನು ಅಲ್ಲದೇ ಇದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರ (ರೂ.20) ಸ್ಟಾಂಪ್ ಪೇಪರ್‍ನೊಂದಿಗೆ ಹಾಗೂ ಸರಕಾರ ಜಾಗವಾಗಿದ್ದಲ್ಲಿ ಜಮೀನು ಯಾವ ಇಲಾಖೆಗೆ ಸಂಬಂಧ ಪಟ್ಟಿದೆಯೋ ಆ ಇಲಾಖೆಯಿಂದ ನಿರಕ್ಷೇಪಣಾ ಪತ್ರದೊಂದಿಗೆ ನಿಗದಿತ ನಮೂನೆ (ಎಇ-5)ಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನ.
ಸಂಬಂಧಪಟ್ಟ ವಿವಿಧ ಇಲಾಖೆಗಳು (ಪೊಲೀಸ್, ಅಗ್ನಶಾಮಕ, ಸ್ಥಳಿಯ ಸಂಸ್ಥೆಗಳು, ತಹಶೀಲ್ದಾರರು) ವರದಿ ಪಡೆಯಬೇಕಾಗಿರುತ್ತದೆ. ವಿವಿಧ ಇಲಾಖೆಗಳಿಂದ ಅಕ್ಟೋಬರ್ 15ರೊಳಗೆ ವರದಿ ತಂದು ಬಂದಲ್ಲಿ ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು.ಮಂಜೂರಾದ ಪರವಾನಿಗೆಯನ್ನು ಅರ್ಜಿದಾರರು ಅಕ್ಟೋಬರ್ 24ರೊಳಗೆ ನಿಗದಿತ ಶುಲ್ಕ (ರೂ.500) ಪಾವತಿಸಿ ನಮೂನೆ ಎಲ್‍ಇ-5 ರಲ್ಲಿ ಪರವಾನಿಗೆ ಪಡೆಯಬಹುದು. ಅಕ್ಟೋಬರ್ 5ರ ನಂತರ ಬಂದ ಅರ್ಜಿಗಳನ್ನು ಹಾಗೂ ಅರ್ಜಿ ಮತ್ತು ನೀಡಿರುವ ದಾಖಲೆಗಳು ಅಪೂರ್ಣವಾದಲ್ಲಿ ಈ ಕಚೇರಿಯಿಂದ ಸ್ವೀಕರಿಸಲಾಗುವುದಿಲ್ಲ ಎಂದು ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳ ಪ್ರಕಟಣೆ ತಿಳಿಸಿದೆ.