ಮಕ್ಕಳ ಮೇಲೆ ಶೋಷಣೆ ಮತ್ತು ದೌರ್ಜನ್ಯ ಕಂಡುಬಂದಲ್ಲಿ ಈ ದೂರವಾಣಿ 1098 ಸಂಖ್ಯೆ ಗೆ ಕರೆ ಮಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.14.ಮಕ್ಕಳ ಶೋಷಣೆ ಮತ್ತು ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಮಕ್ಕಳ ಸಹಾಯವಾಣಿ (ಚೈಲ್ಡ್ ಲೈನ್) 1098 ಕಾರ್ಯ ನಿರ್ವಹಿಸುತ್ತಿದೆ.

Gems

ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಈಗಾಗಲೇ ಈ ಬಗ್ಗೆ ಮಾಹಿತಿ ಫಲಕವನ್ನು ಅಳವಡಿಸಲಾಗಿದೆ. ಪೋಷಣೆ ಅಗತ್ಯವಿರುವ, ಬಾಲಕಾರ್ಮಿಕರು, ಬಾಲ್ಯ ವಿವಾಹಕ್ಕೆ ಒಳಗಾಗಬಹುದಾದ ಹಾಗೂ ಒಳಗಾದ, ಕಾಣೆಯಾದ, ಶಾಲೆಯಿಂದ ಹೊರಗುಳಿದ, ಮಾದಕ ವ್ಯಸನಕ್ಕೆ ಒಳಗಾದ, ಲೈಂಗಿಕ ಶೋಷಣೆಗೆ ಒಳಗಾದವರು ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು.

Also Read  ಉಪ್ಪಿನಂಗಡಿ: ಡಿವೈಡರ್ ಗೆ ಢಿಕ್ಕಿ ಹೊಡೆದ ಬೈಕ್ ➤ ಕಡಬದ ನವವಿವಾಹಿತ ಮೃತ್ಯು

ಮಕ್ಕಳ ಸಹಾಯವಾಣಿ (ಚೈಲ್ಡ್ ಲೈನ್) 1098 ದಿನದ 24 ಗಂಟೆಯೂ ಚಾಲ್ತಿಯಲ್ಲಿದ್ದು ವಿದ್ಯಾರ್ಥಿಗಳು/ಪೋಷಕರು/ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪನಿರ್ದೇಶಕರು (ಆ) ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸಮಗ್ರ ಶಿಕ್ಷಣ – ಕರ್ನಾಟಕ, ದಕ್ಷಿಣ ಕನ್ನಡ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top