ರಸ್ತೆ ದಾಟುತ್ತಿದ್ದ ವ್ಯಕ್ತಿಯ ಪ್ರಾಣ ಉಳಿಸಲು ಹೋಗಿ; ಉದ್ಯಮಿಯ ಪುತ್ರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ .16, ಇಬ್ಬರು ಸ್ನೇಹಿತರೊಂದಿಗೆ ಬೈಕ್ ರೇಸಿಂಗ್ ನಡೆಸಿದ 24ರ ಹರೆಯದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಬೈಕ್ ರೇಸ್‌ನಲ್ಲಿ ಪ್ರಾಣ ಕಳೆದುಕೊಂಡ ಯುವಕನನ್ನು ದೆಹಲಿಯ ಉದ್ಯಮಿ ವಿವೇಕ್‌ ವಿಹಾರ್‌ ಮಗ ಹಿಮಾಂಶು ಬನ್ಸಾಲ್ ಎಂದು ಗುರುತಿಸಲಾಗಿದೆ. ಘಟನೆಯ ಸಂಪೂರ್ಣ ವಿವರ ದೆಹಲಿಯ ಮಂಡಿ ಹೌಸ್‌ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸಿನೀಮಿಯ ರೀತಿಯಲ್ಲಿ ಘಟನೆ ಸೆರೆಯಾಗಿದೆ. ಮೂವರು ಬೈಕ್‌ ರೈಡರ್‌ಗಳು ಪಾರ್ಟಿ ಮುಗಿಸಿಕೊಂಡು ಹಿಂದಿರುಗುವಾಗ ದೆಹಲಿ ಮಧ್ಯಭಾಗದ ಮಂಡಿ ಹೌಸ್‌ ಬಳಿಯಲ್ಲಿ ಟ್ರಾಫಿಕ್‌ನಲ್ಲೂ ಅತಿ ವೇಗದಿಂದ ಓವರ್‌ ಟೇಕಿಂಗ್‌ ಮಾಡುವ ವೇಳೆ ಬೈಕ್‌ ನಿಯಂತ್ರಣ ಕಳೆದುಕೊಂಡು ಈ ಅವಘಡ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Also Read  ಕೇಂದ್ರ ಬಜೆಟ್; ದೇಶದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

ಎಲ್ಲರಿಗಿಂತ ಮುಂದೆ ಹೋಗಿದ್ದ ಹಿಮಾಂಶು ಬೈಕ್ ಮೇಲಿನ ಹಿಡಿತ ಕಳೆದುಕೊಂಡು ಲೇಡಿ ಇರ್ವಿನ್ ಕಾಲೇಜಿನ ಗೋಡೆಗೆ ಅಪ್ಪಳಿಸಿ ಸಾವನ್ನಪ್ಪಿದ್ದಾನೆ. ಡಿಕ್ಕಿಯ ರಭಸಕ್ಕೆ ಹೆಲ್ಮೆಟ್ ಹಾರಿ ಹೋಗಿದ್ದು, ಬೈಕ್ ಕೆಲವು ಮೀಟರ್ ಮುಂದೆ ಹೋಗಿ ಬಿದ್ದಿದೆ. ಬೈಕ್ ರೇಸಿಂಗ್‌ನ ವೇಳೆ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಪ್ರಾಣ ಉಳಿಸಲು ಹೋಗಿ ಹಿಮಾಂಶು ಪ್ರಾಣ ಕಳೆದುಕೊಂಡಿದ್ದಾರೆ. ಹಿಮಾಂಶು ಬನ್ಸಾಲ್‌ ಚಲಾಯಿಸುತ್ತಿದ್ದ ಬೈಕ್‌ ಅತ್ಯಂತ ದುಬಾರಿಯಾಗಿದ್ದು, 4ರಿಂದ 6 ಲಕ್ಷ ರೂ. ಬೆಲೆಬಾಳುವ ಬೈಕ್‌ಗಳಾಗಿದ್ದವು. ಈ ಬೈಕ್‌ಗಳು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡುತ್ತವೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!
Scroll to Top