ಅಡಿಕೆ ಫಸಲು ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13. 2019-20ನೇ ಸಾಲಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ತುಂಬೆ ತೋಟಗಾರಿಕೆ ಕ್ಷೇತ್ರದ ಅಡಿಕೆ ಫಸಲನ್ನು ಇ-ಹರಾಜು ಮತ್ತು ಟೆಂಡರ್ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಇ-ಹರಾಜು ಅವಧಿಯು ಸೆಪ್ಟೆಂಬರ್ 9 ರಿಂದ ಆರಂಭಗೊಂಡು ಅಕ್ಟೋಬರ್ 10 ರಂದು ಕೊನೆಗೊಳ್ಳಲಿದೆ. ಆಸಕ್ತರು ತಮ್ಮ ಬಿಡ್ಡನ್ನು ಇ-ಹರಾಜು ಅಥವಾ ಟೆಂಡರ್ ಮೂಲಕ ಸಲ್ಲಿಸಬಹುದಾಗಿದೆ. ಇ-ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು e.procurement.kar.in ರಲ್ಲಿ ಪಡೆಯಬಹುದಾಗಿದೆ. ಟೆಂಡರ್ ಸಂಖ್ಯೆ:KSHDA /2019-20/Auction.2287.ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ್, ಬಂಟ್ವಾಳ ಇವರಿಂದ ಪಡೆಯಬಹುದು. ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-234102 ಸಂಪರ್ಕಿಸಲು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ

Also Read  ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಸಮಯದಲ್ಲಿ ಬದಲಾವಣೆ

error: Content is protected !!
Scroll to Top