ವಯೋಶ್ರೇಷ್ಠ ಸಮ್ಮಾನ್ 2019 ಪ್ರಶಸ್ತಿ ➤ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ನವದೆಹಲಿಯವರು 2019ನೇ ಸಾಲಿನ “ವಯೋಶ್ರೇಷ್ಠ ಸಮ್ಮಾನ್ 2019” ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.


ಹಿರಿಯ ನಾಗರೀಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಅರ್ಜಿ ಸಲ್ಲಿಸಬಹ್ಮದು. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 17 ಆಗಿದ್ದು, ಅರ್ಜಿಯನ್ನು ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ, ಉರ್ವಸ್ಟೋರ್, ಮಂಗಳೂರು-575006. ದೂರವಾಣಿ ಸಂಖ್ಯೆ: 0824-2458173,2455999 ಈ ಕಚೇರಿಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ Website:-www.dwdsc.kar.nic.in ಮತ್ತು ಅರ್ಜಿ ನಮೂನೆಗಳಿಗಾಗಿ ಕಚೇರಿ ವೇಳೆಯಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ವಿದ್ಯುತ್ ಮಾರ್ಗದ ತುರ್ತು ಕಾಮಗಾರಿಯ ಹಿನ್ನೆಲೆ ➤ ನಾಳೆ ಕಡಬ, ಸುಬ್ರಹ್ಮಣ್ಯ, ಸವಣೂರು, ನೆಲ್ಯಾಡಿ ಪರಿಸರದಲ್ಲಿ ವಿದ್ಯುತ್ ನಿಲುಗಡೆ

error: Content is protected !!
Scroll to Top