ಸ್ಮಾರ್ಟ್ ಸಿಟಿ ಬಸ್ಸ್ ನಿರ್ಮಾಣ ಯೋಜನಾ ವೆಚ್ಚ ಅಧಿಕ ➤ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ಸೂಚನೆ.

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಡೆಗಳಲ್ಲಿ ನಿರ್ಮಿಸಲಾಗಿರುವ ಬಸ್ ಶೆಲ್ಟರ್‍ಗಳ ಯೋಜನಾ ವೆಚ್ಚ ಅಧಿಕವಾಗಿರುವ ಬಗ್ಗೆ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ನಳೀನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.


ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡುತ್ತಿದ್ದರು. ಸ್ಮಾರ್ಟ್ ಸಿಟಿಯಡಿ ಪ್ರತಿ ಬಸ್ ಶೆಲ್ಟರ್‍ಗೆ ರೂ. 12 ಲಕ್ಷ ಖರ್ಚು ಮಾಡಲಾಗಿದೆ. ಆದರೆ ಈ ಬಸ್ಸ್ ಶೆಲ್ಟರ್‍ನಲ್ಲಿ ವಿನ್ಯಾಸ ಅವೈಜ್ಞಾನಿಕವಾಗಿದೆ. ಬಸ್ಸ್ ಶೆಲ್ಟರ್‍ನ ವಿಸ್ತೀರ್ಣ 600 ಚದರ ಅಡಿಯಿದೆ ಎಂದು ತಿಳಿಸಲಾಗಿದೆ. ಆದರೆ ಅಷ್ಟೊಂದು ವಿಸ್ತೀರ್ಣ ಕಂಡು ಬರುತ್ತಿಲ್ಲ. ದೆಹಲಿಯಲ್ಲಿ ಕೇವಲ ರೂ. 6 ಲಕ್ಷಗಳಿಗೆ ಇಂತಹ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.

ಈ ಹಿನ್ನಲೆಯಲ್ಲಿ ಇಷ್ಟೊಂದು ಅಪಾರ ವೆಚ್ಚ ಆಗಿರುವ ಬಗ್ಗೆ ತನಿಖೆ ನಡೆಸುವಂತೆ ಸಂಸದರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಸ್ಮಾರ್ಟ್‍ಸಿಟಿಯಡಿ ಬಸ್ ಶೆಲ್ಟರ್ ನಿರ್ಮಾಣ ಕೈಗೆತ್ತಿಕೊಳ್ಳದಂತೆ ಅವರು ಸೂಚಿಸಿದರು.ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಹಂಪನಕಟ್ಟೆ ಕ್ಲಾಕ್ ಟವರ್ ನಿರ್ಮಾಣವನ್ನು ರೂ. 1 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಆದರೆ ಇದನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.

Also Read  ಪೊಲೀಸ್ ಠಾಣಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ➤ ಮುಂದಿನ 48 ಗಂಟೆಗಳ ಕಾಲ ಪುತ್ತೂರು ನಗರ ಪೊಲೀಸ್ ಠಾಣೆ ಮತ್ತೆ ಸೀಲ್‌ಡೌನ್

ಇದರಿಂದ ಈ ಪ್ರದೇಶದಲ್ಲಿ ಸಂಚಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಅವರು ಆಕ್ಷೇಪಿಸಿದರು. ಕ್ಲಾಕ್ ಟವರ್ ನಿಂದ ಆರ್.ಟಿ.ಒ ಸರ್ಕಲ್‍ನವರೆಗೆ ಕೇಔಲ 300 ಮೀಟರ್ ರಸ್ತೆಗೆ ಕಾಂಕ್ರೀಟೀಕರಣ ಮಾಡಲು ರೂ. 6 ಕೋಟಿಯಷ್ಟು ಮೊತ್ತ ನಿಗದಿ ಮಾಡಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೇ, ನಗರದ ಒಳಚರಂಡಿ ಮಿಸ್‍ಲಿಂಕಿಂಗ್ ಸರಿಪಡಿಸಲು ರೂ. 55 ಕೋಟಿಯನ್ನು ಅಮೃತ್ ಯೋಜನೆಯಡಿ ಇಡಲಾಗಿದೆ.

ಆದರೂ ಸ್ಮಾರ್ಟ್‍ಸಿಟಿಯಲ್ಲಿ ಮತ್ತೆ ಇದೇ ಯೋಜನೆಗೆ ಹಣ ನಿಗದಿ ಪಡಿಸಿರುವುದು ಸರಿಯಲ್ಲ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಗೆ ಸ್ಮಾರ್ಟ್ ಸಿಟಿ ವತಿಯಿಂದ ಹಣ ನೀಡದಂತೆ ಅವರು ಸೂಚಿಸಿದರು. ಕಂಕನಾಡಿ ರೈಲ್ವೇ ಸ್ಟೇಷನ್ ರಸ್ತೆಯನ್ನು ಪಡೀಲ್‍ನಿಂದ ರೈಲ್ವೇ ಸ್ಟೇಷನ್ ಮೂಲಕ ನಾಗುರಿವರೆಗೆ ರಿಂಗ್ ರಸ್ತೆ ಮಾದರಿಯಲ್ಲಿ ಸ್ಮಾರ್ಟ್‍ಸಿಟಿ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಅವರು ಸೂಚಿಸಿದರು. ಪಂಪ್‍ವೆಲ್‍ನಲ್ಲಿ ಕೇಂದ್ರ ಬಸ್ಸ್ ನಿಲ್ದಾಣ ನಿರ್ಮಾಣವನ್ನು ತ್ವರಿತ ರೀತಿಯಲ್ಲಿ ಯೋಜನೆ ಜಾರಿಗೆ ತರಬೇಕು. ಹಂಪನಕಟ್ಟೆ ಹಳೇ ಸರ್ವಿಸ್ ಬಸ್ಸ್ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣವನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲು ಅವರು ಸೂಚಿಸಿದರು.

Also Read  ಸೆ. 21ರಂದು ಪ್ರಾಥಮಿಕ ಶಾಲಾ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟ

error: Content is protected !!
Scroll to Top