ತುಳು ಚಿತ್ರ ಗಿರಿಗಿಟ್ ಗೆ ನ್ಯಾಯಾಲಯ ತಡೆಯಾಜ್ಞೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ತುಳು ಚಿತ್ರ ‘ಗಿರಿಗಿಟ್‌ʼ ಗೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಈ ಚಿತ್ರದಲ್ಲಿ ನ್ಯಾಯಾಂಗ ಮತ್ತು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಕೀಲರ ಸಂಘವು ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆ.

Gems

.ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ಎಂ.ಪಿ ಶೆಣೈ ವಾದ ಮಂಡಿಸಿದ್ದು, ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಹರೀಶ್‌ ಅವರು ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದಾರೆ.ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ, ನಟ ರೂಪೇಶ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಬೇಸರವಾಗಿದೆ.

Also Read  ಮಂಗಳೂರು: ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆಯ ಇರಿದು ಕೊಲೆ ► ಕೊಲೆಗೈದು ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ನಾವು ಯಾವುದೇ ಅಪರಾಧ ಮಾಡಿಲ್ಲ. ವಕೀಲರೊಬ್ಬರಲ್ಲಿನ ಬೇಜವಾಬ್ದಾರಿತನವನ್ನು ಪಾತ್ರ ಮೂಲಕ ವಿಡಂಬನೆಯಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವಷ್ಟೇ. ನಮಗೆ ಸೆನ್ಸಾರ್‌ ಮಂಡಳಿ ಕೂಡಾ ಯು ಸರ್ಟಿಫಿಕೇಟ್‌ ನೀಡಿದೆ. ಆದರೂ ಈ ತಡೆಯಾಜ್ಞೆ ಯಾಕೆಂದು ಅರ್ಥವಾಗುತ್ತಿಲ್ಲ ಎಂದು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ಹೋರಾಟ ಅಥವಾ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರೂಪೇಶ್‌ ಶೆಟ್ಟಿ ಹೇಳಿದ್ದಾರೆ.

error: Content is protected !!
Scroll to Top