(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.10.ಸಿರಿ ತೋಟಗಾರಿಕೆ ಸಂಘದ ವತಿಯಿಂದ ಸೆಪ್ಟೆಂಬರ್ 7 ರಂದು “ಜೇನುಕೃಷಿ” ತರಬೇತಿ ಕಾರ್ಯಕ್ರಮವು ಮಂಗಳೂರಿನ ಕದ್ರಿ ಬಾಲಭವನದಲ್ಲಿ ಜರುಗಿತು. ತರಬೇತಿ ಕಾರ್ಯಕ್ರಮವನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಹಾಗೂ ಸಿರಿ ತೋಟಗಾರಿಕೆ ಸಂಘದ ಪದನಿಮಿತ್ತ ಕಾರ್ಯದರ್ಶಿಯವರಾದ ಜಾನಕಿ ವಿ. ದೀಪ ಬೆಳಗಿಸಿ ಉದ್ಘಾಟಿಸಿದರು.
ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಯುಗೇಂದ್ರ ರವರು ನಡೆಸಿಕೊಟ್ಟರು. ಪ್ರಾಯೋಗಿಕ ತರಬೇತಿಯನ್ನು ಜೇನು ಪ್ರದರ್ಶಕರಾದ ಪ್ರವೀಣ್ ಹಾಗೂ ಮೂಡಬಿದ್ರೆಯ ಜೇನುಕೃಷಿಕರಾದ ವಾಮನ ನಾಯ್ಕ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ಅನಂತರಾಮ ಹೇರಳ, ಖಜಾಂಚಿ ಪಿ. ಸುರೇಶ್ ಶೆಣೈ ಆಡಳಿತ ಸದಸ್ಯರಾದ ಜೆ ಉಮೇಶ್, ಹರಿಶ್ಚಂದ್ರ ಅಡ್ಕ ಉಪಸ್ಥಿತರಿದ್ದರು.