(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.10. ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯು.ಬಿ.ಎಂ.ಸಿ.ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಪಿಲ ಸಾವಯವ ಕೃಷಿಕರ ಸಂಘ, ಪರಂಡೆ ಕೊಣಾಜೆ ಇವರ ಸಹಕಾರದೊಂದಿಗೆ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಸಪ್ಟೆಂಬರ್ 8 ಯು.ಬಿ.ಯಂ.ಸಿ.ಹಿರಿಯ ಪ್ರಾಥಮಿಕ ಶಾಲೆ, ಪರಂಡೆಯಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರವು ನಡೆಯಿತು.
ಕಲ್ಲಿಮಾರುಗುತ್ತು ಪ್ರಸಾದ್ ರೈ ಇವರು ಆಯುಷ್ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು. ಆಯುಷ್ ಚಿಕಿತ್ಸಾ ವಿಧಾನವು ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಜನಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಅಜಿತನಾಥ ಇಂದ್ರ, ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಆಯಷ್ ಇಲಾಖೆಯ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.
ಕೊಣಾಜೆ ಗ್ರಾಮಪಂಚಾಯತ್ ಸದಸ್ಯರುಗಳಾದ ಹರೀಶ್ಚಂದ್ರ ಶೆಟ್ಟಿಗಾರ್, ವೇದಾವತಿ, ಗೀತಾ ಶೆಟ್ಟಿಗಾರ್, ಇಕ್ಬಾಲ್, ಇನ್ನಿತರರು ಉಪಸ್ಥಿತರಿದ್ದರು. ಡಾ ಸಹನಾ ಪಾಂಡುರಂಗ ಇವರು ಸ್ವಾಗತಿಸಿ, ಅತಿಥಿ ಪರಿಚಯ ಮಾಡಿದರು. 120ಕ್ಕೂ ಹೆಚ್ಚಿನ ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದರು.