ಹಳೆಯಂಗಡಿ ಗ್ರಾಮದ ಜಲಶಕ್ತಿ – ಜಲಾಮೃತ ಅಭಿಯಾನದ ಬಗ್ಗೆ ➤ ವಿಶೇಷ ಗ್ರಾಮ ಸಭೆ, ವಾರ್ಡ್ ಸಭೆ ಹಾಗೂ ಜಮಾಬಂದಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.10. ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮದ ಜಲಶಕ್ತಿ- ಜಲಾಮೃತ ಅಭಿಯಾನದ ಬಗ್ಗೆ ವಿಶೇಷ ಗ್ರಾಮ ಸಭೆ ಸಪ್ಟೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ಕಚೇರಿಯ ರಾಜೀವಗಾಂಧಿ ಸಭಾಭವನದಲ್ಲಿ ನಡೆಯಲಿದೆ.ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಯಂಗಡಿ, ಪಾವಂಜೆ ಮತ್ತು ಸಸಿಹಿತ್ಲು ಗ್ರಾಮಗಳ 2019-20ನೇ ಸಾಲಿನ ಪ್ರಥಮ ಹಂತದ ವಾರ್ಡು ಸಭೆಗಳ ವಿವರ ಇಂತಿವೆ : ಸಸಿಹಿತ್ಲು ವಾರ್ಡು ಸಂಖ್ಯೆ 1 ರ ವಾರ್ಡು ಸಭೆ ಸಪ್ಟೆಂಬರ್ 12 ರಂದು ಬೆಳಿಗ್ಗೆ 10.30 ಗಂಟೆಗೆ ಹಾಗೂ ಸಸಿಹಿತ್ಲು ವಾರ್ಡು ಸಂಖ್ಯೆ 2 ರ ವಾರ್ಡು ಸಭೆ ಬೆಳಿಗ್ಗೆ 11 ಗಂಟೆಗೆ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಹಳೆಯಂಗಡಿ ವಾರ್ಡು ಸಂಖ್ಯೆ 2 ವಾರ್ಡು ಸಭೆ ಮಧ್ಯಾಹ್ನ 2.30 ಗಂಟೆಗೆ ಮತ್ತು ವಾರ್ಡು ಸಂಖ್ಯೆ 3 ರ ವಾರ್ಡು ಸಭೆ ಮಧ್ಯಾಹ್ನ 3.30 ಗಂಟೆಗೆ ಇಂದಿರಾಗಾಂಧಿ ಸಮುದಾಯಭವನ, ಇಂದಿರಾನಗರದಲ್ಲಿ ನಡೆಯಲಿದೆ. ಹಳೆಯಂಗಡಿ ವಾರ್ಡು ಸಂಖ್ಯೆ 1 ರ ವಾರ್ಡು ಸಭೆ ಸಂಜೆ 4.30 ಗಂಟೆಗೆ ಸಾಗು ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಹಳೆಯಂಗಡಿ ವಾರ್ಡು ಸಂಖ್ಯೆ 4 ರ ವಾರ್ಡು ಸಭೆ ಸಪ್ಟೆಂಬರ್ 13 ರಂದು ಬೆಳಿಗ್ಗೆ 10.30 ಗಂಟೆಗೆ ರಾಜೀವಗಾಂಧಿ ಸಭಾಭವನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯಲಿದೆ.

Also Read  ಜುಲೈ 13ರಂದು ಬ್ಯಾರಿ ಅಕಾಡೆಮಿಯಿಂದ ಪುಸ್ತಕ ಮತ್ತು ಸಿಡಿ ಬಿಡುಗಡೆ

ಪಾವಂಜೆ ವಾರ್ಡು ಸಂಖ್ಯೆ 1 ವಾರ್ಡು ಸಭೆ ಬೆಳಿಗ್ಗೆ 11.30 ಗಂಟೆಗೆ, ಹಾಗೂ ಪಾವಂಜೆ ವಾರ್ಡು ಸಂಖ್ಯೆ 2 ರ ವಾರ್ಡು ಸಭೆ ಮಧ್ಯಾಹ್ನ 2.30 ಗಂಟೆಗೆ ರಾಜೀವಗಾಂಧಿ ಸಭಾಭವನ ಗ್ರಾಮ ಪಂಚಾಯತ್ ಕಚೇರಿ ಹಳೆಯಂಗಡಿಯಲ್ಲಿ ನಡೆಯಲಿದೆ. ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಯಂಗಡಿ, ಪಾವಂಜೆ ಮತ್ತು ಸಸಿಹಿತ್ಲು ಗ್ರಾಮಗಳ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಸಪ್ಟೆಂಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಪಾವಂಜೆ ಗ್ರಾಮದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.ಹಳೆಯಂಗಡಿ ಗ್ರಾಮ ಪಂಚಾಯತ್ ನ 2018-19ನೇ ಸಾಲಿನ ಜಮಾಬಂದಿಯು ಸೆಪ್ಟೆಂಬರ್ 20 ರಂದು ಬೆಳಿಗ್ಗೆ 11 ಗಂಟೆಗೆ ಹಳೆಯಂಗಡಿ ಗ್ರಾಮ ಪಂಚಾಯತ್ ನ ರಾಜೀವಗಾಂಧಿ ಸೇವಾ ಕೇಂದ್ರದ ಕಟ್ಟಡದಲ್ಲಿ ನಡೆಯಲಿದೆ.

Also Read  ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸೂಚನೆ

error: Content is protected !!
Scroll to Top